ಕೆಲಸದ ಅನುಸಾರ ಕೂಲಿ ಪಾವತಿಸಿ

ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಬೆಂಚಮರಡಿ ಗ್ರಾಮದಲ್ಲಿ ಹಳ್ಳದ ಹೂಳು ಎತ್ತಿದ ಕಾಮಗಾರಿಯನ್ನು ಪರಿಶೀಲಿಸಿದರು. ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸಹಾಯಕ ನಿರ್ದೇಶಕ ಶಿವಾನಂದ ಬೇವೂರು, ಪ್ರಮುಖರಾದ ಅಭಿರಾಮ್, ಸ್ವಾಮಿ, ಕೆ.ಸಿ.ಗಂಗಾಧರ್, ಶಿವಾನಂದ ರಡ್ಡಿ, ಪಿಡಿಒಗಳಾದ ತಿಮ್ಮಣ್ಣ, ಕೃಷ್ಣ ಹುನುಗುಂದ ಇತರರಿದ್ದರು.

Published on

ಮಸ್ಕಿ: ತಾಲೂಕಿನ ಮೆದಕಿನಾಳ, ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಶುಕ್ರವಾರ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಅಧಿಕಾರಿಗಳ ತಂಡ ಪರಿಶೀಲಿಸಿತು.

ಕಾರ್ಮಿಕರಿಗೆ ನರೇಗಾ ಯೋಜನೆ ಕುರಿತು ಅಗತ್ಯ ಮಾಹಿತಿ ನೀಡಬೇಕು. ಕೆಲಸದ ಅನುಸಾರ ಅಳತೆ ಪುಸ್ತಕದಲ್ಲಿ ನಮೂದಿಸಿ ಕೂಲಿ ಪವಾತಿಸಬೇಕು ಎಂದರು. ಬಳಿಕ ತೋಟಗಾರಿಕೆ ಇಲಾಖೆ ಸಹಕಾರದಿಂದ ಪಪ್ಪಾಯ ಬೆಳೆದ ರೈತರೊಂದಿಗೆ ಚರ್ಚಿಸಿದರು. ನರೇಗಾದಡಿ ನಿರ್ಮಿಸಿದ ದನದ ಶೆಡ್ ಪರಿಶೀಲಿಸಿದರು. ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ತಾಂತ್ರಿಕ ಸಂಯೋಜಕರಾದ ಅಭಿರಾಮ್ ಮತ್ತು ಸ್ವಾಮಿ ಮೆದಕಿನಾಳ ಗ್ರಾಪಂ ವ್ಯಾಪ್ತಿಯ ನಾಗರಬೆಂಚಿ, ಅಂತರಗಂಗಿ ಗ್ರಾಮದ ಬೂದು ನೀರು ನಿರ್ವಹಣೆ ಕಾಮಗಾರಿ, ನರೇಗಾದಡಿ ಹೂಳು ಎತ್ತಿದ ಹಳ್ಳ, ಕೆರೆ, ನಾಲೆಗಳ ಕಾಮಗಾರಿ, ಸಾಮಾಜಿಕ ಅರಣ್ಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿದ ನೆಡುತೋಪು ಪರಿಶೀಲಿಸಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸಹಾಯಕ ನಿರ್ದೇಶಕ ಶಿವಾನಂದ ಬೇವೂರು, ತಾಂತ್ರಿಕ ಸಂಯೋಜಕರಾದ ಅಭಿರಾಮ್, ಸ್ವಾಮಿ, ಪ್ರಮುಖರಾದ ಕೆ.ಸಿ.ಗಂಗಾಧರ್, ಶಿವಾನಂದ ರಡ್ಡಿ, ಪಿಡಿಒಗಳಾದ ತಿಮ್ಮಣ್ಣ, ಕೃಷ್ಣ ಹುನುಗುಂದ, ಗ್ರಾಪಂ ತಾಂತ್ರಿಕ ಸಂಯೋಜಕರಾದ ಅಶೋಕ, ಪಂಪಣ್ಣ, ಸೋಮಶೇಖರ್, ತೋಟಗಾರಿಕೆ ಇಲಾಖೆ ಅಧಿಕಾರಿ ನೀಲಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net