ತ್ಯಾಜ್ಯ ವಿಲೇವಾರಿ ಸಿಬ್ಬಂದಿಗೆ ವೇತನ ನೀಡಿ

ಹರಪನಹಳ್ಳಿಯಲ್ಲಿ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರಗೆ ಎಐಸಿಸಿಟಿಯು ವತಿಯಿಂದ ಮನವಿ ಸಲ್ಲಿಸಿಲಾಯಿತು. ಎಐಸಿಸಿಟಿಯು ಪದಾಧಿಕಾರಿಗಳಾದ ಎಚ್.ಭರಮಪ್ಪ, ಎಸ್.ರೇವಪ್ಪ, ನಾಗರಾಜ, ಕೆ.ಮೈಲವ್ವ, ಸಿ.ಬಸವರಾಜ, ರಮೇಶ ಬಾಗಳಿ, ಎಸ್‌ಎಲ್‌ಡಬ್ಲುೃಎಂ ಕಾರ್ಮಿಕರಾದ ಸಿ.ಕೆ.ರೇಣುಕಾ, ಕನಕನವರ ಮರಿಯಮ್ಮ, ಬಾರಕಿ ಗೌರಮ್ಮ, ಹರಿಜನರ ಲತಾ ಇತರರಿದ್ದರು.

Published on

ಹರಪನಹಳ್ಳಿ: ಘನ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗೆ ವೇತನ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಪಂನಲ್ಲಿ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರಗೆ ಎಐಸಿಸಿಟಿಯು ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಿಪಿಐಎಂಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇರ ಪರುಶುರಾಮ್ ಮಾತನಾಡಿ, ಬಾಗಳಿ ಗ್ರಾಪಂನಲ್ಲಿ ಸಂಜೀವಿನಿ ಒಕ್ಕೂಟದಡಿ ಕಾರ್ಯನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ವಾಹನದ ಚಾಲಕ ಮತ್ತು ಸಹಾಯಕ ನಿರ್ವಾಹಕರಿಗೆ ಕಳೆದ ಹಲವಾರು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿರುವುದು ಖಂಡನೀಯ. 15ನೇ ಹಣಕಾಸು ಕ್ರಿಯಾ ಯೋಜನೆಯಡಿ ಈವರೆಗೂ ಮೀಸಲಿಟ್ಟ ಹಣದ ಬಗ್ಗೆ ಹಾಗೂ ಎಲ್ಲ ಗ್ರಾಪಂಗಳ ಎಸ್‌ಎಲ್‌ಡಬ್ಲುೃಎಂ ಕಾರ್ಮಿಕರಿಗೆ ನೀಡಿರುವ ಗೌರವಧನದ ಕುರಿತು ಮಾಹಿತಿ ನೀಡಬೇಕು ಎಂದು ಆಗ್ರಹಿಸಲಾಯಿತು.

ಎಐಸಿಸಿಟಿಯು ತಾಲೂಕು ಕಾರ್ಯದರ್ಶಿ ಸಂತೋಷ್ ಗುಳೇದಹಟ್ಟಿ ಮಾತನಾಡಿ, ತಾಲೂಕಿನಲ್ಲಿ ನರೇಗಾ ಕಾಮಗಾರಿ ಕುಂಠಿತಗೊಂಡಿದ್ದು, ಈಗಾಗಲೇ ನಡೆದಿರುವ ಕಾಮಗಾರಿಯಲ್ಲಿ ಕೆಲವು ಕಡೆ ಕಳಪೆಯಾಗಿದೆ. ತಾಪಂ ಸಭಾಂಗಣವನ್ನು ಯಾವ ಆಧಾರದ ಮೇಲೆ ಬಳಸಲಾಗುತ್ತಿದೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಲಾಯಿತು.

ಅರಸೀಕೆರೆಯಲ್ಲಿ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಪಂಗಳಿಗೆ ಸಂಬಂಧಿಸಿದ ದೂರುಗಳಿಗೆ ಈವರೆಗೂ ಉತ್ತರ ನೀಡಿಲ್ಲ. ಬೆಣ್ಣಿಹಳ್ಳಿ ಗ್ರಾಪಂ ವ್ಯಾಪ್ತಿಯ ನಜೀರ್ ನಗರದಲ್ಲಿ ಪಿಡಿಒ, ಹಣ ಪಡೆದು ಅನರ್ಹ ಫಲಾನುಭವಿಗೆ ನಿವೇಶನ ನೀಡಿದ್ದು, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net