ಜೂನ್ ಅಂತ್ಯದೊಳಗೆ ಅಸಲು ಪಾವತಿಸಿ

16-GPT-1
Published on

ಗುಂಡ್ಲುಪೇಟೆ: ಜೂನ್ ಅಂತ್ಯದೊಳಗೆ ಸುಸ್ತಿ ಕಟ್ಟಿದರೆ ಬಡ್ಡಿ ಮನ್ನಾ ಆಗಲಿದ್ದು, ಸಾಲಗಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್ ಮನವಿ ಮಾಡಿದರು.

ಕರೊನಾ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯದೊಳಗೆ ಇದ್ದ ಅವಧಿಯನ್ನು ಸರ್ಕಾರ ಜೂನ್ ಅಂತ್ಯದವರೆಗೂ ವಿಸ್ತರಿಸಿದೆ. ಈ ಅವಧಿ ಒಳಗೆ ಸಾಲದ ಅಸಲನ್ನು ಕಟ್ಟಿದವರಿಗೆ ಸರ್ಕಾರ ಬಡ್ಡಿ ಮನ್ನಾ ಮಾಡಲಿದೆ. ಸದ್ಯ ಬ್ಯಾಂಕು 1 ಕೋಟಿ 59 ಲಕ್ಷದ 10 ಸಾವಿರ ಬಾಕಿ ಕಟ್ಟಿದರೆ ಹೊಸದಾಗಿ 3 ಕೋಟಿ ರೂ. ಹೊಸ ಸಾಲ ದೊರಕಲಿದೆ. ಬ್ಯಾಂಕಿನ ನಿರ್ದೇಶಕರು ತಮ್ಮ ಭಾಗದಲ್ಲಿ ಉಳಿದಿರುವ ಸಾಲ ವಸೂಲಾತಿ ಹೊಣೆ ಹೊತ್ತಿದ್ದಾರೆ. ಆದ್ದರಿಂದ ಜೂನ್ ಅಂತ್ಯದೊಳಗೆ ಸುಸ್ತಿ ಪಾವತಿಸುವ ಮೂಲಕ ಬಡ್ಡಿ ಮನ್ನಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮ್ಯಾನೇಜರ್ ಆನಂದ್, ಮೈಸೂರು ಬ್ಯಾಂಕ್ ತಾಂತ್ರಿಕ ಅಧಿಕಾರಿ ಉಮೇಶ್, ನಿರ್ದೇಶಕರಾದ ಹೊರೆಯಾಲ ಮಹೇಶ್, ಎಸ್.ಎಂ.ಮಲ್ಲಿಕಾರ್ಜುನ, ಕೊಡಸೋಗೆ ಶಿವಬಸಪ್ಪ, ಡಿ.ಎಸ್.ಶಿವಸ್ವಾಮಿ, ಬಸವಣ್ಣ, ಬಸವರಾಜು, ಈಶ್ವರಪ್ಪ, ಶಿವಣ್ಣ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net