ಮೊದಲು ಬಾಕಿ ಬಿಲ್ ಕೊಡಿ, ಆಮೇಲೆ ಕಾರ್ಖಾನೆ ಆರಂಭಿಸಿ

mdl 6- protest
ಮುಧೋಳ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಎಸಿ ಶ್ವೇತಾ ಬಿೀಡಿಕರ ಭೇಟಿ ನೀಡಿ ಮಾತನಾಡಿದರು. ಮುತ್ತಪ್ಪ ಕೋಮಾರ, ಸುಭಾಷ್ ಶಿರಬೂರ, ಬಸವಂತ ಕಾಂಬಳೆ, ನಾಗೇಶ್ ಗೋಲಶೆಟ್ಟಿ, ಹನುಮಂತ ನಬಾಬ್, ದುಂಡಪ್ಪ ಯರಗಟ್ಟಿ, ರಾಕೇಶ್ ಗಡದನ್ನವರ, ನಾಗೇಶ್ ಪೂಜಾರಿ, ಮಲ್ಲು ರಡ್ಯಾರಟ್ಟಿ, ಅಶೋಕ್ ಪಡಸಲಗಿ ಇತರರಿದ್ದರು.
Published on

ಮುಧೋಳ: ಈ ವರ್ಷದ ಕಬ್ಬಿನ ದರ ಘೋಷಿಸುವುದು ಹಾಗೂ ಬಾಕಿ ಬಿಲ್‌ಗಳನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಿ ಈ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ರೈತರು ಬೆಳೆದ ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ಸಿಗಬೇಕಾದರೆ ಪ್ರತಿ ವರ್ಷ ಹೋರಾಟ ಮಾಡಿಯೇ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿ. ಕೂಡಲೇ ಹಿಂದಿನ ಎಲ್ಲ ಬಾಕಿ ಬಿಲ್‌ಗಳನ್ನು ರೈತರಿಗೆ ನೀಡಿ ಈ ವರ್ಷದ ಕಬ್ಬಿನ ದರ ಘೋಷಿಸದೆ ನ. 15ಕ್ಕೆ ಆರಂಭ ಮಾಡಲು ಆದೇಶ ನೀಡಿದ್ದ ಸರ್ಕಾರ ದಿಢೀರನೆ ನ. 8ನೇ ತಾರೀಖು ಮಾಡಿದ್ದು ಖಂಡನಾರ್ಹ. ಒಂದು ವೇಳೆ ಈ ದಿನ ಪ್ರಾರಂಭ ಮಾಡಬೇಕಾದರೆ ಹಳೇ ಬಿಲ್ ನೀಡಿ ಹೊಸ ದರ ಘೋಷಿಸಲು ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರು ಮುಂದಾಗದಿದ್ದರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿೀಡಿಕರ ಭೇಟಿ ನೀಡಿ, ಹೋರಾಟ ಶಾಂತಗೊಳಿಸಲು ಪ್ರಯತ್ನಿಸಿದರಾದರೂ ರೈತರು ಜಿಲ್ಲಾಧಿಕಾರಿಗಳು ಬರುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಸಿಪಿಐ ಮಹದೇವ ಶಿರಹಟ್ಟಿ ನೇತೃತ್ವದ ತಂಡ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.

ತಹಸೀಲ್ದಾರ್ ಮಹಾದೇವ ಸನಮುರಿ, ರೈತ ಮುಖಂಡರಾದ ಮುತ್ತಪ್ಪ ಕೊಮಾರ, ಸುಭಾಷ್ ಶಿರಬೂರ, ಬಸವಂತ ಕಾಂಬಳೆ, ನಾಗೇಶ್ ಗೋಲಶೆಟ್ಟಿ, ಹನುಮಂತ ನಬಾಬ್, ದುಂಡಪ್ಪ ಯರಗಟ್ಟಿ, ರಾಕೇಶ್ ಗಡದನ್ನವರ, ನಾಗೇಶ್ ಪೂಜಾರಿ, ಮಲ್ಲು ರಡ್ಯಾರಟ್ಟಿ, ಅಶೋಕ್ ಪಡಸಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net