

ವಿಜಯಪುರ: ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಕರ ವಸೂಲಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆ ತಾ.ಪಂ. ಇಒ ವಿ.ಎಸ್. ಹಿರೇಮಠ ಗುರುವಾರ ಬಾಕಿ ಕರ ಉಳಿಸಿಕೊಂಡಿರುವ ಮನೆಗಳಿಗೆ ತೆರಳಿ ತೆರಿಗೆಯನ್ನು ನಿಗದಿತ ಸಮಯಕ್ಕೆ ಪಾವತಿಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ನಾಗರಿಕರಿಗೆ ಮನವಿ ಮಾಡಿದರು.
ನಂತರ ಮಾತನಾಡಿದ ಅವರು, ಗ್ರಾ.ಪಂ. ವತಿಯಿಂದ ತೆರಿಗೆ ಆಂದೋಲನ ಹಮ್ಮಿಕೊಂಡಿದ್ದು ಹತ್ತು ಸಾವಿರಕ್ಕಿಂತ ಅಧಿಕ ಕರ ಬಾಕಿ ಇದ್ದ ಮನೆಗಳಿಗೆ ನೋಟಿಸ್ ನೀಡಬೇಕು. ಗ್ರಾಪಂ ಸಿಬ್ಬಂದಿಗಳು ಎಲ್ಲರು ಭಾಗವಹಿಸಬೇಕು. ಐದು ದಿನದಲ್ಲಿ ಮೂರು ಲಕ್ಷ ಅಧಿಕ ತೆರಗೆ ಸಂಗ್ರಹ ವಾಗಬೇಕೆಂದು ಗುರಿ ನಿಗದಿಪಡಿಸಿದರು. ಕರ ವಸೂಲಿಗೆ ಪಿಒಸಿ ಮಷಿನ್ ಬಳಸಬೇಕು. ಪ್ರಥಮ ಹಂತದಲ್ಲಿ ಕಾರಜೋಳ ಗ್ರಾಮ ನಂತರ ದೂಡಿಹಾಳ ಮತ್ತು ತೊನಶ್ಯಾಳ ಗ್ರಾಮದಲ್ಲಿ ಬಾಕಿ ಇರುವ ತೆರೆಗೆಯನ್ನು ತ್ವರಿತವಾಗಿ ಸಂಗ್ರಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಿ ತೆರವುಗೊಳಿಸಲು ಗಡುವು ನೀಡಬೇಕು. ನಿಗದಿತ ಅವದಿಯಲ್ಲಿ ತೆರಗೆ ಸಂಗ್ರಹಿಸಿದರೆ ಸಿಬ್ಬಂದಿಗಳ ವೇತನ ಮತ್ತು ಗ್ರಾಮದ ಮೂಲ ಸೌಕರ್ಯಗಳಿಗೆ ಅನುಧಾನ ಕಲ್ಪಿಸಲು ಸಹಕಾರವಾಗುತ್ತದೆ ಎಂದರು.
ಕಾರ್ಯದರ್ಶಿ ಎಸ್.ಎಸ್. ಪಡಸಲಗಿ, ಐಇಸಿ ಸಂಯೋಜಕ ಶಾಂತು ಇಂಡಿ, ಎ.ಎಚ್. ಮಲಘಾಣ, ಮಂಜು ತೊನಶ್ಯಾಳ, ರಾಜು ದೊಡಮನಿ, ಬಾಗವ್ವ ಕಂಬಾರ, ಪರಸಪ್ಪ ಹಿಟ್ಟಿನಹಳ್ಳಿ ಮತ್ತಿತರರಿದ್ದರು.