ಅಂಗನವಾಡಿ ಕೇಂದ್ರಗಳ ಬಾಡಿಗೆ ಪಾವತಿಸಿ: ಕೆ.ನಾಗರತ್ನ ಆಗ್ರಹ

WhatsApp Image 2023-08-08 at 11.07.19 AM
Published on

ಹೊಸಪೇಟೆ: ತಾಲೂಕಿನ ೧೨೮ ಅಂಗನವಾಡಿ ಕೇಂದ್ರಗಳಿಗೆ ಕಳೆದ ೮ ತಿಂಗಳಿAದ ಬಾಡಿಗೆ ಹಣ ಬಿಡುಗಡೆ ಮಾಡಬೇಕುಮತ್ತು ಐದು ತಿಂಗಳಿAದ ಬಾಕಿ ಇರುವ ತರಕಾರಿ ವೆಚ್ಚವನ್ನು ಕೂಡಲೇ ಪಾವತಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ನಾಗರತ್ನ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು ೩೨೧ ಅಂಗನವಾಡಿಗಳ ಪೈಕಿ ೧೨೮ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ೮ ತಿಂಗಳಿAದ ಬಾಡಿಗೆ ಹಣ ಬಿಡುಗಡೆಯಾಗದ ಕಾರಣ ಕೇಂದ್ರಗಳನ್ನು ತೆರವುಗೊಳಿಸುವಂತೆ ಕಟ್ಟಡ ಮಾಲೀಕರು ತಾಕೀತು ಮಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ, ಪ್ರಯೋಜನವಿಲ್ಲದಂತಾಗಿದೆ ಎಂದು ದೂರಿದರು.

ಅದರಂತೆ ಐದು ತಿಂಗಳಿAದ ತರಕಾರಿ ವೆಚ್ಚವೂ ಬಾಕಿಯಿದ್ದು, ಕಾರ್ಯಕರ್ತೆಯರು ಸ್ವಂತ ಹಣದಲ್ಲಿ ತರಕಾರಿ ಖರೀದಿಸುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಸರ್ಕಾರ ನೀಡುವ ಅಲ್ಪ ಮೊತ್ತದ ಸಂಭಾವನೆಯಲ್ಲಿ ಸಂಸಾರ ತೂಗಿಸುವುದೇ ಕಷ್ಟಕರವಾಗಿದೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಅಂಗವಾಡಿ ಕಾರ್ಯಕರ್ತೆಯರನ್ನು ಮಕ್ಕಳ ಸಮಗ್ರ ಶಿಶು ಶಿಕ್ಷಣದ ಹೊರತಾಗಿ ಚುನಾವಣೆ ಸೇರಿದಂತೆ ಅನ್ಯ ಕೆಲಸಕ್ಕೆ ನಿಯೋಜಿಸುತ್ತಿರುವುದರಿಂದ ಮೂಲ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ, ೨ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಂಗನವಾಡಿಗಳಿಗೆ ಸಕಾಲಕ್ಕೆ ಧಾನ್ಯಗಳನ್ನು ಪೂರೈಕೆ ಮಾಡುತ್ತಿಲ್ಲ. ಪರಿಣಾಮ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಸ್ವಪ್ನಾ, ಪ್ರಮುಖರಾದ ಕೆಂಚೆಮ್ಮ, ಸುಮಂಗಳ, ಶಕುಂತಲಾ, ದ್ರಾಕ್ಷಾಯಿಣಿ, ಚ್ಯೋತೇಶ್ವರಿ, ಮಾರಮ್ಮ, ಸಕ್ರಮ್ಮ, ಸುರೇಖಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net