ಸಾಲ ಮರುಪಾವತಿಸಿ ಸಹಕಾರ ನೀಡಿ

LXR_MEETING
Published on

ಲಕ್ಷ್ಮೇಶ್ವರ: ಜನರು ಸಹಕಾರಿ ಕ್ಷೇತ್ರಕ್ಕೆ ಸಹಕಾರ ನೀಡುವುದರ ಮೂಲಕ ಸಂಸ್ಥೆಗಳು ಮುಂಚೂಣಿಯಲ್ಲಿ ಬರುವಂತೆ ಮಾಡಬೇಕಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಸ್.ಪಿ. ಪಾಟೀಲ ಹೇಳಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಗುರುವಾರ ಕರೆಯಲಾದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ‘ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಸಾಲ ತೆಗೆದುಕೊಂಡ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಬೇಕು. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ ಬೇರೊಬ್ಬರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ರೈತರು ಸಾಲ ಮರುಪಾವತಿ ಮಾಡುವಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಕಾಲದಲ್ಲಿ ಮಳೆ ಇಲ್ಲದೆ ಹಲವು ಬಾರಿ ಬೆಳೆಗಳು ನಾಶವಾಗಿ ತೊಂದರೆಗೀಡಾಗುತ್ತಿದ್ದಾರೆ. ಕೆಲ ಸಾಲಗಾರರು ಸಾಲ ಮನ್ನಾ ಆಗುತ್ತದೆ ಎನ್ನುವ ಮನಸ್ಥಿತಿಯಲ್ಲಿ ಇದ್ದು ಸಾಲ ಮರುಪಾವತಿ ಮಾಡಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ ಸಾಲಗಾರರು ಇಂತಹ ಮನಸ್ಥಿತಿಯಿಂದ ಹೊರ ಬಂದು ತಾವು ತೆಗೆದುಕೊಂಡ ಸಾಲವನ್ನು ಶೀಘ್ರದಲ್ಲಿ ಮರುಪಾವತಿ ಮಾಡಬೇಕು ಎಂದು ಹೇಳಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ವಿ. ಪಾಟೀಲ ವರದಿ ವಾಚಿಸಿದರು. ಈ ವೇಳೆ ಬ್ಯಾಂಕ್ ನಿರ್ದೇಶಕ ಆರ್.ಎನ್. ಕಪಲಟ್ಟಿ, ಅಶೋಕ ಪಲ್ಲೇದ, ಆರ್.ಬಿ. ಹುಲಗೂರ, ವಿ.ಎಚ್. ಜಗ್ಗಲರ, ಡಿ.ಎಚ್. ಪಟ್ಟೇದ, ಎಸ್.ಎಸ್. ಸುಗ್ನಳ್ಳಿ, ಎಂ.ಬಿ. ಕಡಕೋಳ, ಎಸ್.ಎಸ್.ಪಾಟೀಲ, ಬಿ.ಪಿ. ಬಸವರೆಡ್ಡಿ, ಜಿ.ಡಿ. ಲಮಾಣಿ, ಎಚ್.ಐ. ಮಲ್ಲಿಕೇರಿ, ವಿ.ಎನ್. ಹತ್ತಿ, ಆರ್.ಬಿ. ಅಳಗವಾಡಿ ಹಾಗೂ ಬ್ಯಾಂಕ್‌ನ ವ್ಯವಸ್ಥಾಪಕ ಚೇತನಕುಮಾರ ವಿ. ಇದ್ದರು. ಬ್ಯಾಂಕ್ ಸಿಬ್ಬಂದಿ ಎಂ.ಎನ್. ಮಾಳಗಿ ಹಾಗೂ ಎ.ವೈ. ಬಾಕಳೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net