ಆರೋಗ್ಯದ ಕಡೆ ಗಮನ ಹರಿಸಿ

23Kgfph-1
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕೆಜಿಎಫ್​: ನಗರಸಭೆಯಲ್ಲಿ 119 ಮಂದಿ ಪೌರಕಾರ್ಮಿಕರಿದ್ದು, 59 ಮಂದಿಗೆ ಮಾತ್ರ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನೀಡಲಾಗಿದ್ದು, ಇನ್ನುಳಿದ 60 ಮಂದಿಗೆ ಸರ್ಕಾರದಿಂದ ನಿವೇಶನ ಹಂಚಿಕೆ ಮಾಡಿ ಗೃಹಭಾಗ್ಯಯೋಜನೆಯಡಿ ಮನೆ ನಿರ್ಮಿಸುವ ಕೆಲಸ ಮಾಡಲಾಗುವುದು ಎಂದು ಶಾಸಕಿ ರೂಪಕಲಾ ಭರವಸೆ ನೀಡಿದರು.

ನಗರಸಭಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ಕಾರದಲ್ಲಿ ಪೌರಕಾರ್ಮಿಕರಿಗೆ ಯಾವುದೇ ಸವಲತ್ತುಗಳು ಇರಲಿಲ್ಲ. ಕಾರ್ಮಿಕರ ಸತತ ಹೋರಾಟದಿಂದ ಕಾರ್ಮಿಕರನ್ನು ಕಾಯಂಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದರು.

ಪೌರ ಕಾರ್ಮಿಕರು ಕುಡಿತದಿಂದ ದೂರವಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕೆಟ್ಟ ಅಭ್ಯಾಸಗಳಿಂದ ಅನಾಹುತ ಮಾಡಿಕೊಂಡು ನಿಮ್ಮನ್ನೇ ನಂಬಿದ ಕುಟುಂಬದವರಿಗೆ ಅನ್ಯಾಯ ಮಾಡಬಾರದು. ಬಂದ ವೇತನದಲ್ಲಿ ಹಣ ಉಳಿತಾಯ ಮಾಡಿ, ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದರು.

ಕೆಲವು ಪೌರ ಕಾರ್ಮಿಕರು ಕೇವಲ ಹಾಜರಾತಿ ಪುಸಕ್ತದಲ್ಲಿ ಸಹಿ ಮಾಡಿ ಎಲ್ಲೋ ಕುಳಿತುಕೊಂಡು ಕಾಲಹರಣ ಮಾಡುತ್ತಿರುತ್ತಾರೆ, ಅವರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಯಾರು ಕಳ್ಳಾಟ ಮಾಡುತ್ತಾರೋ ಅಂತಹವರ ವಿರುದ್ಧ ನಗರಸಭೆ ಪೌರಾಯುಕ್ತರು ಕ್ರಮಕೈಗೊಳ್ಳಬೇಕು. ಪ್ರಾಮಾಣಿಕ ಸೇವೆ ಸಲ್ಲಿಸುವ ಪೌರಕಾರ್ಮಿಕರನ್ನು ಗುರುತಿಸಿ ಅವರನ್ನು ಪ್ರತಿವರ್ಷ ಪೌರಕಾರ್ಮಿಕರ ದಿನಾಚರಣೆಯಲ್ಲಿ ಸನ್ಮಾನಿಸಬೇಕು ಎಂದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಮು, ಕಾರ್ಯದರ್ಶಿ ವೆಂಕಟೇಶ್​, ಉಪಾಧ್ಯಕ್ಷ ರಾಜಾ, ಮೂರ್ತಿ, ಓಬಳಯ್ಯ, ಗಿರಿ, ರಾಜೇಂದ್ರ, ವಾಸು, ಕೊಂಡಯ್ಯ, ತಂಗರಾಜು, ಅರುಣ್​, ನಾರಾಯಣಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net