ಬಾಕಿ ವೇತನ ಪಾವತಿಸಿ-ಏಜೆನ್ಸಿ ಮೇಲೆ ಕ್ರಮ ವಹಿಸಿ, ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

HORAGUTTIGE NOUKARRA PRATIBHATANE
ವಿಜಯಪುರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗೆ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಹುಲಗಪ್ಪ ಎಚ್. ಚಲವಾದಿ, ಲಕ್ಷ್ಮಣ ಮಸಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ಬಾಕಿ ವೇತನ ಪಾವತಿ, ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸ್ ಪಡೆಯುವುದು ಹಾಗೂ ಸಕಾಲಕ್ಕೆ ವೇತನ ಪಾವತಿಸದ ಕಲಬುರಗಿ ಮನೀಷ್ ಮ್ಯಾನ್ ಪವರ್ ಏಜೆನ್ಸಿ ಮೇಲೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಏಜೆನ್ಸಿ ವಿರುದ್ಧ ಘೋಷಣೆ ಕೂಗಿದರು. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾನರ್ ಪ್ರದರ್ಶಿಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸದೆ ಇರುವುದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಅಲ್ಲದೇ ಸಿಬ್ಬಂದಿ ಕಡಿತ ಮಾಡಿರುವುದರಿಂದ ಕೆಲಸದ ಹೊರೆ ಹೆಚ್ಚಾಗಿ ಅನಾರೋಗ್ಯದಿಂದ ನೌಕರರು ಬಳಲುವಂತಾಗಿದೆ. ಕ್ರೈಸ್ ವಸತಿನಿಲಯಗಳ ವೇತನಕ್ಕಾಗಿ ಅನುದಾನವಿದ್ದರೂ ಮನೀಷ ಮ್ಯಾನ್ ಪಾವರ್ ನಿರ್ಲಕ್ಷತನದಿಂದ ವೇತನ ಸಮಯಕ್ಕೆ ಸರಿಯಾಗಿ ಪಾವತಿಸದೇ ನೌಕರರು ಗೋಳಾಡುವಂತಾಗಿದೆ ಎಂದರು.

ಜಿಲ್ಲಾಧ್ಯಕ್ಷ ಹುಲಗಪ್ಪ ಎಚ್. ಚಲವಾದಿ ಮಾತನಾಡಿ, ಬಾಕಿ ಉಳಿದಿರುವ ವೇತನ ಪಾವತಿಸಬೇಕು. ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಸು ಪಡೆಯಬೇಕು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ 50 ವಿದ್ಯಾರ್ಥಿಗಳಿಗೆ 3 ಜನರಂತೆ ಹಿಂದಿನ ಆದೇಶ ಜಾರಿಮಾಡಬೇಕು. ಕಳೆದ ಮೂರು ವರ್ಷಗಳಿಂದ ಕಡಿಮೆ ವೇತನ ಪಾವತಿಸಿದ ಮನೀಷ್ ಮ್ಯಾನ್ ಪವರ್ ಏಜೆನ್ಸಿಯಿಂದ ವ್ಯತ್ಯಾಸದ ಹಣ ಕೊಡಿಸಬೇಕು ಮತ್ತು ಇಡೀ ರಾಜ್ಯದಲ್ಲಿ ಕ್ರೈಸ್ ವಸತಿ ಶಾಲೆಗಳಲ್ಲಿ ಅಲ್ಲಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿರುವುದರಿಂದ ಎಲ್ಲ ವಸತಿ ಶಾಲೆಗಳಲ್ಲಿ ಪ್ರಿನ್ಸಿಪಾಲ್, ವಾರ್ಡನ್ ಮತ್ತು ದೈಹಿಕ ಶಿಕ್ಷಣಕ್ಕೆ ಮಹಿಳೆಯರು ಇರಬೇಕೆಂದು ಒತ್ತಾಯಿಸಿದರು.

ಲಕ್ಷ್ಮಣ ಮಸಳಿ, ಯಮನಪ್ಪ ಬಜಂತ್ರಿ, ರಾಮಚಂದ್ರ ಕೋಳಿ, ನೂರಜಾನ ಯಲಗಾರ, ಸಂಗಮ್ಮ ಹಂಜಗಿ, ಶಾಂತಾ ಕ್ವಾಟಿ, ಬೇಬಿ ಹೊಸಮನಿ, ಮೀನಾಕ್ಷಿ ತಳವಾರ, ರಾಮವ್ವ ಬಜಂತ್ರಿ, ಮಲಕಾಜಿ ಚಲವಾದಿ, ಗೌರಕ್ಕ ಬೀಳೂರ, ಅನಸೂಯಾ ಬಡಿಗೇರ, ಲಕ್ಷ್ಮಿ ಮಂಗಸೂಳಿ, ಲಕ್ಷ್ಮಿ ಕಡೇಮನಿ, ಮಹಾದೇವಿ ಕಡೇಮನಿ, ರೇಣುಕಾ ಮಾಡಗಿ, ಹೀನಾ ಪಡೇಕನೂರ, ಸುಜಾತಾ ಕೂಡಗಿ, ನಿತೀಶ ತಳಕೇರಿ, ಮಲಕಾರಿ ಮೋರೆ, ಶ್ರೀಕಾಂತ ಗುಡಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net