6 ತಿಂಗಳ ಬಾಕಿ ವೇತನ ಪಾವತಿಸಿ

ಕಾರಟಗಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು. ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ಸದಸ್ಯರಾದ ಅಭಿಷೇಕ್, ಚೇತನ್, ಶರಣಬಸವ, ಯೋಗೇಶ್, ವಿರೂಪಾಕ್ಷ, ನೂರುಪಾಷಾ, ಅನಿತಾ, ಜಯಶ್ರೀ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ಸದಸ್ಯರಾದ ಅನಿಲ್ ಕುಮಾರ್, ಸೋಮನಾಥ ಇತರರಿದ್ದರು.

Published on

ಕಾರಟಗಿ: ನರೇಗಾ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ, 6 ತಿಂಗಳ ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗೆ ಈಡೆರಿಸುವಂತೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ಸಹಯೋಗದಲ್ಲಿ ಹೊರಗುತ್ತಿಗೆ ನೌಕರರು ಮಂಗಳವಾರ ತಾಪಂ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪದಾಧಿಕಾರಿ ವಿಶ್ವನಾಥ ಜಿನ್ನೂರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ 6 ತಿಂಗಳಿಂದ ವೇತನ ಪಾವತಿಸಿಲ್ಲ. ಇದರಿಂದ ನೌಕರರಿಗೆ ಆರ್ಥಿಕ ಸಂಕಷ್ಟ ಉಂಟಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ನಮ್ಮ ಸಮಸ್ಯೆ ಅರಿತು ಶೀಘ್ರ ವೇತನ ಪಾವತಿಸಬೇಕು ಎಂದರು.

ತಾಪಂ ಐಇಸಿ ಸಂಯೋಜಕ ಸೋಮನಾಥ ಗೌಡರ್ ಮಾತನಾಡಿ, ವಿವಿಧ ಬೇಡಿಕೆ ಈಡೇರಿಕೆಗಾಗಿ ಜು.7 ರಿಂದ ನೌಕರರು ರಾಜ್ಯಾದ್ಯಂತ ಅಸಹಕಾರ ಚಳುವಳಿ ನಡೆಸುತ್ತಿದ್ದಾರೆ. ಸಂಕಷ್ಟದಲ್ಲಿರುವ ನೌಕರರಿಗೆ ಕೂಡಲೇ ಬಾಕಿ ವೇತನ ಪಾವತಿಸಬೇಕು. ಜತೆಗೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ಸದಸ್ಯರಾದ ಅಭಿಷೇಕ್, ಚೇತನ್, ಶರಣಬಸವ, ಯೋಗೇಶ್, ವಿರೂಪಾಕ್ಷ, ನೂರುಪಾಷಾ, ಅನಿತಾ, ಜಯಶ್ರೀ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ಸದಸ್ಯರಾದ ಅನಿಲ್ ಕುಮಾರ್, ಸೋಮನಾಥ, ಇಮಾಂಬಿ, ವೀರೇಶ್, ಮುದುಕಪ್ಪ, ಯಮನೂರು, ಕಾಶೀನಾಥ್, ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net