ಪವಿತ್ರಾ ಗೌಡ ಕೈದಿ ನಂಬರ್ ಎಷ್ಟು..? ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಬಂಧಿ ನಂಬರ್ ವಿತರಣೆ..

Darshan
Published on

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗಿದ್ದಾರೆ. ಅವರ ಜೊತೆ ಇನ್ನೂ ಕೆಲವು ಸಹಚರರು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ  ಜೈಲಿನಲ್ಲಿ 1 ದಿನ ಕಳೆದಿರುವ ಪವಿತ್ರಾ ಗೌಡ ಹಾಗೂ ಅವರ ಗ್ಯಾಂಗ್​​ಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲು ಅಧಿಕಾರಿಗಳು​ ನೀಡಿದ್ದಾರೆ.

ಜೈಲು ಅಧಿಕಾರಿಗಳು ಇಂದು ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ನೀಡಿದ್ದಾರೆ. ಪವಿತ್ರಾ ಗೌಡ ವಿಚಾರಣಾಧೀನ (UTP) ಕೈದಿ ನಂಬರ್- 6024 ಅನ್ನು ನೀಡಲಾಗಿದೆ. ಹೈಫೈ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಮುದ್ದೆ ಮುರಿಯೋ ಸ್ಥಿತಿ ಉಂಟಾಗಿದೆ. ಸದ್ಯ ಅವರು ಮಹಿಳಾ ವಿಭಾಗದ ಡಿ- ಬ್ಯಾರಕ್​ನಲ್ಲಿ ಸೆರೆವಾಸದಲ್ಲಿದ್ದಾರೆ.

ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಪವಿತ್ರಾ ಚಡಪಡಿಸುತ್ತಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನು ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಎನ್ನಲಾಗಿದೆ. ಆ ಕಾರಣದಿಂದ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು ಎಂಬ ಆರೋಪ ದರ್ಶನ್​, ಪವಿತ್ರಾ ಗೌಡ ಹಾಗೂ ಸಹಚರರ ಮೇಲಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net