

ಕುಶಾಲನಗರ
ಇಲ್ಲಿನ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಸಹ ಪ್ರಾಧ್ಯಾಪಕಿ ಮತ್ತು ವಿಭಾಗದ ಮುಖ್ಯಸ್ಥೆ ಟಿ. ಪವಿತ್ರ ಪಿಎಚ್.ಡಿ. ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸಂಶೋಧನಾ ಮಾರ್ಗದರ್ಶಕ ಡಾ. ಬಿ.ಎಸ್. ನಾಗಭೂಷಣ ನೇತೃತ್ವದಲ್ಲಿ, "Vehicular Ad-hoc Networks (VANETs) ಗಳಲ್ಲಿ ಸಂಭವಿಸುವ ಭದ್ರತಾ ದಾಳಿಗಳು ಮತ್ತು ಅವುಗಳ ವರ್ಗೀಕರಣದ ಕುರಿತ ಶೋಧಾನುಷ್ಠಾನಗಳು" ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ, ಬೆಂಗಳೂರುವಿನ ಬಿ.ಎಂ.ಎಸ್. ಇಂಜಿನಿಯರಿAಗ್ ಕಾಲೇಜು ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಗ್ರಂಥವನ್ನು ಯಶಸ್ವಿಯಾಗಿ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
Vehicular Ad-hoc Networks (VANETs) ಎಂಬುವುದುMobile Ad-hoc Networks (MANETs) ಭಾಗವಾಗಿದ್ದು, ಇದರಲ್ಲಿ ವಾಹನಗಳು ಪರಸ್ಪರ ಅಥವಾ ರಸ್ತೆಬದಿಯ ನಿಶ್ಚಿತ ಮೂಲಸೌಕರ್ಯಗಳಾದ ರೋಡ್ ಸೈಡ್ ಯೂನಿಟ್‌ನÀಗಳೊಂದಿಗೆ ಸಂಪರ್ಕ ಹೊಂದಿ ರಸ್ತೆ ಪರಿಸ್ಥಿತಿ, ಟ್ರಾಫಿಕ್, ಅಪಘಾತಗಳು ಹಾಗೂ ಇತರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಇದಕ್ಕಾಗಿ ವಾಹನದ ಮಾಲೀಕರಿಂದ ವ್ಯಕ್ತಿಗತ ಮಾಹಿತಿಯನ್ನೂ ಹಂಚಿಕೊಳ್ಳಬೇಕಾಗುತ್ತಿದ್ದು, ಈ ಮಾಹಿತಿ ಸುರಕ್ಷಿತವಾಗಿಲ್ಲದಿದ್ದರೆ ಚಾಲಕರ ಗೌಪ್ಯತೆ ತೊಂದರೆಗೆ ಒಳಗಾಗಬಹುದು. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಭದ್ರತೆಯನ್ನು ಗಟ್ಟಿಮಾಡಲು, ಡಾ. ಟಿ. ಪವಿತ್ರ ಡೀಪ್ ಲರ್ನಿಂಗ್ ತಂತ್ರಜ್ಞಾನಗಳ ಸಹಾಯದಿಂದ ಹೊಸದಾದ ಭದ್ರತಾ ಮಾದರಿಯನ್ನು ರೂಪಿಸುವತ್ತ ಶೋಧ ನಡೆಸಿದ್ದಾರೆ. ಈ ಶೋಧ ಕಾರ್ಯವು ಭದ್ರತೆಯೊಂದಿಗೆ ಚಾಲಕರ ಗೌಪ್ಯತೆಯನ್ನು ಕಾಪಾಡುವ ಹಾಗೂ ನಕಲಿ ಟ್ರಾಫಿಕ್ ಎಚ್ಚರಿಕೆಗಳಿಂದ ಜಾಲವನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ದಿಕ್ಕು ನೀಡಲಿದೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಲಾಗಿದೆ.