

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸುತ್ತಿರುವುದು ಖಂಡನೀಯ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಾ ಡಿ.ನಾಯ್ಕ ಹೇಳಿದರು.
ಪಟ್ಟಣದಲ್ಲಿ ಸಂಘಟನೆಯ ಸಭೆಯಲ್ಲಿ ಬುಧವಾರ ಮಾತನಾಡಿದರು. ತಾಂತ್ರಿಕತೆ ಆಧರಿಸಿ ಪಡಿತರ ಚೀಟಿಗಳನ್ನು ನೋಂದಣಿ ಮಾಡಲಾಗಿರುತ್ತದೆ. ಇದೀಗ ಬಡವರ ಕಾರ್ಡ್‌ಗಳೇ ರದ್ದಾಗುತ್ತಿವೆ. ನಾಲ್ಕೈದು ತಿಂಗಳಿಂದ ಸರ್ಕಾರದಿಂದ ನಮಗೆ ಕಮಿಷನ್ ಕೂಡ ಬಂದಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎಂ.ಕೆ.ರಾಮಚಂದ್ರ ಮಾತನಾಡಿ, ರಾಜ್ಯ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಹಣ ಸಂದಾಯ ಮಾಡುವ ಬದಲಿಗೆ ಅಕ್ಕಿ ಅಥವಾ ಇತರ ಆಹಾರ ಪದಾರ್ಥಗಳನ್ನು ನೀಡಬಹುದಾಗಿದೆ. ರಾಜ್ಯದಲ್ಲಿರುವ 20,424 ಪಡಿತರ ವಿತರಕರಿಗೆ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಸಾಮಾಜಿಕ ಭದ್ರತೆ ಇಲ್ಲ ಎಂದು ದೂರಿದರು.
ವಿಜಯನಗರ ಜಿಲ್ಲಾಧ್ಯಕ್ಷ ಐಲಿ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಕೋಶಾಧ್ಯಕ್ಷ ಡಿ.ಬಿ.ಶಿವಾನಂದಪ್ಪ, ಉಪಾಧ್ಯಕ್ಷ ರಾಜಶೇಖರ್ ತಳವಾರ, ಪದಾಧಿಕಾರಿಗಳಾದ ಬಂಡ್ರಿ ತಿಮ್ಮಣ್ಣ, ಎಂ.ನಾಗರಾಜ್, ಜ್ಯೋತಿ ಪ್ರಕಾಶ್, ವಿಜಯ ನಂದಿಗೌಡ, ವೀರಣ್ಣ ಕುಪ್ಪಿನಕೆರೆ, ಮಂಜುನಾಥ, ರಾಜು ಗೊಂದಿ, ರೇವತಿ ಶ್ರೀಧರ ಡೋರಿ, ನಾಗರಾಜ್ ಉಪರೆ, ಯಶೋದಾ ಗುಜ್ಜರ್, ಎಚ್.ಬಿ.ಬಸಟೆಪ್ಪ, ಕೆ.ಎಂ.ರವಿ, ಷಣ್ಮುಖನಗೌಡ್ರು, ಚಂದ್ರಶೇಖರ ಇದ್ದರು.