ಪಾವಂಜೆ ಶ್ರೀ ದೇವರ ಉತ್ಸವ ಬಲಿ

New Project (21)
Published on

ಹಳೆಯಂಗಡಿ: ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಧ್ವಜಾರೋಹಣ ನಡೆಯಿತು. ಶ್ರೀಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ, ಶ್ರೀ ದೇವರ ಧ್ವಜಾರೋಹಣ, ನವಕ ಪ್ರಧಾನ, ಮಹಾಪೂಜೆ. ರಾತ್ರಿ ಶ್ರೀ ದೇವರಿಗೆ ಹೂವಿನ ಪೂಜೆ, ಬಯನ ಬಲಿ, ಶತರುದ್ರಾಭಿಷೇಕ, ರಾಶಿ ಪೂಜೆ, ರಂಗ ಪೂಜೆ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಮಾ.4ರಂದು ಹಗಲು ರಥೋತ್ಸವ, 5ರಂದು ರಾತ್ರಿ ರಥೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net