

ಬೆಂಗಳೂರು : ಆ.15 ಶುಕ್ರವಾರದಂದು ಗಂಟೆಗೆ ಕಥಕ್ ಲೋಕದ ಉದಯೋನ್ಮುಖ ನೃತ್ಯಪಟು ಪಾವನೀ ಕಲ್ವಕಲ್ವ ಅವರ ಬಹುನಿರೀಕ್ಷಿತ ಕಥಕ್ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಸದಾಶಿವನಗರದ ಸ್ಯಾಂಕಿ ಟ್ಯಾಂಕ್ ಸಮೀಪ ಇರುವ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಜೆ 6 ಗಂಟೆಯಿಂದ ಆರಂಭವಾಗುವ ವಿಶೇಷ ಕಾರ್ಯಕ್ರಮದಲ್ಲಿ ಹೊಸತೊಂದು ಕಥಕ್ ಲೋಕ ಅನಾವರಣಗೊಳ್ಳಲಿದೆ.
ಕಥಕ್ ಕ್ಷೇತ್ರದ ದಿಗ್ಗಜರಾದ ಮುರುಳಿ ಮೋಹನ್ ಕಲ್ವಕಲ್ವ ಮತ್ತು ನಂದಿ ಮೆಹ್ತಾ ಅವರ ಶಿಷ್ಯೆಯಾಗಿರುವ ಪಾವನೀ ಸಾಂಪ್ರದಾಯಿಕ ನೃತ್ಯ ಪ್ರಕಾರಕ್ಕೆ ಹೊಸ ಕಳೆ ಕಟ್ಟಿಕೊಡಲಿದ್ದಾರೆ.
ನರ್ತನ್ ಅಕಾಡೆಮಿ ಆಪ್ ಡಾನ್ಸ್ ಆ್ಯಂಡ್ ಮ್ಯೂಸಿಕ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಥಕ್ ದಿಗ್ಗಜರಾದ ಪ್ರವೀಣ್ ಡಿ ರಾವ್, ಮುರುಳಿ ಮೋಹನ್ ಕಲ್ವಕಲ್ವ, ನಂದಿನಿ ಮೆಹ್ತಾ, ಶ್ರುತಿ ಕಾಮತ್, ಗುರುಮೂರ್ತಿ ವೈದ್ಯ, ಆರ್ಯಮನ್ ಕಲ್ವಕಲ್ವ, ಶಾದಜ್ ಗೋಡ್ಖಿಂಡಿ, ಗಣೇಶ ದೇಸಾಯಿ, ಕೀರ್ತನ್ ಹೊಳ್ಳ, ಸೂರ್ಯರಾವ್, ಸರ್ರಾಜ್ ಖಾನ್ ಮತಯ್ತು ರೋಹನ್ ಭೂತಯ್ಯ ವೇದಿಕೆ ಹಂಚಿಕೊಳ್ಳಲಿದ್ದಾರೆ.