ಪವನ್ ಶಾಲಾ ಸಂಸತ್‌ಗೆ ಆಯ್ಕೆ

web 2
Published on

ಧಾರವಾಡ: ನಗರದ ಪವನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಸತ್ ಪದಾಧಿಕಾರಿಗಳ ಆಯ್ಕೆ ಗುರುವಾರ ನಡೆಯಿತು.
ಚುನಾವಣೆಯಲ್ಲಿ ಹೆಚ್ಚು ಮತ ಪಡೆದ 10ನೇ ತರಗತಿಯ ವಿದ್ಯಾರ್ಥಿಗಳಾದ ನಂದೀಶ ತಿರ್ಲಾಪುರ ಹಾಗೂ ಅನ ಕುಲಕರ್ಣಿ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ದಿಶಾ ಕಲ್ಲಾಪುರ ಉಪ ಪ್ರಧಾನಿಯಾಗಿ, ಮಾನ್ಯಾ ನಾಯಕ ಸ್ಪೀಕರ್ ಹಾಗೂ ನಿಯಾಜುದ್ದೀನ್ ಡೆಪ್ಯೂಟಿ ಸ್ಪೀಕರ್ ಆಗಿ ಆಯ್ಕೆಯಾದರು. ಇದೇವೇಳೆ ಶಾಲೆಯ ವಿವಿಧ ಸಮಿತಿಗಳಿಗೆ ಮಂತ್ರಿಗಳು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ ಚಲಾಸಿದರು.
ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆ ರತ್ನಾ ಪಾಟೀಲ ಸಂಸತ್ ಪದಾಧಿಕಾರಿಗಳ ಹೆಸರುಗಳನ್ನು ೋಷಿಸಿದರು. ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಪ್ರಾಚಾರ್ಯ ವಿಕ್ರಂ ಮಹಾಶಬ್ದೆ, ಹಿರಿಯ ಶಿಕ್ಷಕಿ ಸುಜಾತಾ ಮೊಕಾಶಿ, ಮುಖ್ಯ ಸಂಯೋಜಕಿ ಸವಿತಾ ಕಂಬಿ ಹಾಗೂ ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net