ಕನಕಾಚಲ ದೇವಸ್ಥಾನದಲ್ಲಿ ಪವಮಾನ ಹೋಮ

kanakachala
ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಅಧಿಕ ಮಾಸದ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪವನಕುಮಾರ ಗುಂಡೂರು, ಶ್ರೀನಿವಾಸ್ ಆಚಾರ್ ಕುಲಕರ್ಣಿ ಇತರರಿದ್ದರು.
Published on

ಕನಕಗಿರಿ: ಅಧಿಕ ಮಾಸದ ಅಂಗವಾಗಿ ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ 33 ಪವಮಾನ ಹೋಮ ಕಾರ್ಯಕ್ರಮ ಭಾನುವಾರ ನಡೆಯಿತು.

ಕನಕಾಚಲಪತಿಯ ದೇವಸ್ಥಾನ

ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಹಮ್ಮಿಕೊಳ್ಳುವ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳಿಂದ ಅಧಿಕ ಪುಣ್ಯ ಪ್ರಾಪ್ತಿ ದೊರೆಯಲಿದೆ. ಲೋಕ ಕಲ್ಯಾಣಾರ್ಥ ಕನಕಾಚಲಪತಿಯ ದೇವಸ್ಥಾನದಲ್ಲಿ 33 ಪವಮಾನ ಹೋಮ, ಗರುಡೋತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ದೇವಸ್ಥಾನ ಸಮಿತಿ ಸದಸ್ಯ ಕನಕಾಚಲ ತಿಳಿಸಿದರು.

ಕನಕಾಚಲಪತಿ ದೇವಸ್ಥಾನದಿಂದ ಕಲ್ಮಠದವರೆಗೆ ಪಲ್ಲಕ್ಕಿ ಉತ್ಸವ ಮೆರವಣಿಗೆ, ಬ್ರಾಹ್ಮಣ ಸಮಾಜದ ಮಹಿಳೆಯರಿಂದ ಕೋಲಾಟ ಹಾಗೂ ವಿವಿಧ ಭಜನಾ ತಂಡಗಳಿಂದ ಶೋಭಾಯಾತ್ರೆ ನಡೆಯಿತು. ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು. ಶನಿವಾರ ಮತ್ತು ಭಾನುವಾರ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ವೆಂಕಟೇಶ ಕುಲಕರ್ಣಿ, ಬಿ.ವಿ. ಜೋಷಿ, ಗೋಪಾಲಕೃಷ್ಣ, ಕೆ.ಎಚ್. ಕುಲಕರ್ಣಿ, ರಾಮಾಚಾರ್ ವಿಠಲಾಪುರ, ವಾಜೇಂದ್ರಾಚಾರ್, ವಿಮಲಾಬಾಯಿ ಜೋಷಿ, ಶ್ರೀದೇವಿ ಕುಲಕರ್ಣಿ, ಅರುಣಾ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net