

ಮುದ್ದೇಬಿಹಾಳ: ತಾಲೂಕಿನ ಬಸರಕೋಡಕ್ಕೆ ತೆರಳುವ ಕ್ರಾಸ್‌ನಲ್ಲಿನ ನೂತನ ಮಹಾದ್ವಾರವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ಗ್ರಾಮದಲ್ಲಿ ಪವಾಡ ಬಸವೇಶ್ವರರ ಮೂರ್ತಿ, ದೇವಸ್ಥಾನದ ಕಲಶಗಳನ್ನು ನೂರಾರು ಮಹಿಳೆಯರ ಕುಂಭ, ವಿವಿಧ ವಾದ್ಯ ವೈಭವದೊಂದಿಗೆ ಮೆರವಣಿಗೆ ನಡೆಸಲಾಯಿತು. ಪವಾಡ ಬಸವೇಶ್ವರ ದೇವಸ್ಥಾನದ ಸಾಧುಗಳಿಂದ ಮಹಾದ್ವಾರದ ಲೋಕಾರ್ಪಣೆ ಮಾಡಲಾಯಿತು.
ಪವಾಡ ಬಸವೇಶ್ವರ ಸಂಸ್ಥೆ ಅಧ್ಯಕ್ಷ ಕೆ.ವೈ.ಬಿರಾದಾರ, ಮುಖಂಡರಾದ ಶ್ರೀಶೈಲ ಮೇಟಿ, ಎಸ್.ಬಿ.ನಾಡಗೌಡರ, ಸಂಗಪ್ಪ ಬಾಗೇವಾಡಿ, ಮಲ್ಲಣ್ಣ ಮೇಟಿ, ಬಾಬು ಕೊಣ್ಣೂರ, ನಾಗರಾಜ ಕಮತರ, ವೀರೇಶ ಮಂಕಣಿ, ಸಂತೋಷ ಸೂಳಿಭಾವಿ ಇತರರಿದ್ದರು.