ತಲಪರಿಗೆಗಳ ಪುನರುಜ್ಜೀವನ ; ಜೀವ ಸಂಕುಲದ ದಾಹ ನೀಗಿಸಿದ ನರೇಗಾ ; ಪಾವಗಡ ತಾಲೂಕಿನಲ್ಲಿ 6 ನೀರಿನ ಕೊಳ ನಿರ್ಮಾಣ

21 PVG 01
Published on

ಪಾವಗಡ : ತಾಲೂಕಿನ ಬೆಟ್ಟದ ತಪ್ಪಲಿನಲ್ಲಿದ್ದ ಕೆಲ ತಲಪರಿಗೆಗಳನ್ನು(ನೀರು ಜಿನುಗುವ ಚಿಲುಮೆಗಳು) ಗುರುತಿಸಿ ಪುನರುಜ್ಜೀನಗೊಳಿಸಿ ವರ್ಷದ 365 ದಿನಗಳೂ ದನಕರುಗಳ, ವನ್ಯಜೀವಿಗಳ ದಾಹ ನೀಗಿಸಲು ಮನರೇಗಾ ಯೋಜನೆಯ ನೀರಿನ ಕೊಳ ಉಪಯುಕ್ತವಾಗಿದೆ.

ಹೂಳುತುಂಬಿ, ಬತ್ತಿದ್ದ ಜವಗು ಪ್ರದೇಶಗಳನ್ನು ಗುರುತಿಸಿ ತಾಲೂಕಿನಲ್ಲಿ 6 ನೀರಿನ ಕೊಳ ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಎಲ್ಲ್ಲೆಡೆ ನೀರಿನ ಹಾಹಾಕಾರ ಹೆಚ್ಚಾಗುತ್ತದೆ, ಅನೇಕ ಬೋರ್‌ವೆಲ್‌ಗಳು ಸ್ಥಗಿತಗೊಳ್ಳುತ್ತವೆ, ಕೆರೆ-ಕಟ್ಟೆಗಳಲ್ಲಿ ಒಂದು ಹನಿ ನೀರಿಲ್ಲದೆ ಪ್ರಾಣಿ ಮತ್ತು ಪಕ್ಷಿ ಸಂಕುಲ ನರಳುತ್ತವೆ.

ನರೇಗಾ ಯೋಜನೆಯಲ್ಲಿ ನಲಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಾಲಮ್ಮನಹಳ್ಳಿಯಲ್ಲಿ ಗ್ರಾಮದ ಜವಗು ಬಾವಿ ಹತ್ತಿರ ನಿರಂತರವಾಗಿ ನೀರಿನ ಸೋರಿಕೆ ತಡೆಯಲು 12 ಅಡಿ ಆಳ 22 ಡಯಾ ಮೀ. ಅಗಲ, 22 ಮೀಟರ್ ಉದ್ದವಾಗಿ 10 ಲಕ್ಷ ಲೀ., ನೀರುಸಂಗ್ರಹ ಸಾಮರ್ಥ್ಯದ ನೀರಿನ ಕೊಳ ನಿರ್ಮಾಣ ಮಾಡಲು 1072 ಮಾನವ ದಿನಗಳು ಸೃಜನೆಯಾಗಿವೆ. ತಾಲೂಕಿನ ನಲಿಗಾನಹಳ್ಳಿ, ಮರಿದಾಸನ ಹಳ್ಳಿ, ಕೊಡಮೊಡಗು, ಪಳ್ಳಿವಳ್ಳಿ ಸೇರಿ ಒಟ್ಟು ಆರು ಗ್ರಾಮ ಪಂಚಾಯಿತಿಗಳಲ್ಲಿ ಸುಸಜ್ಜಿತ ವಾಟರ್‌ಪೊಲ್‌ಗಳನ್ನು ನಿರ್ಮಾಣ ಮಾಡಲಾಗಿದೆ.

ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರು : ಈ ನೀರಿನ ಕೊಳ ನಿರ್ಮಾಣದಿಂದಾಗಿ ಸಾಕಷ್ಟು ಪ್ರಾಣಿ, ಪಕ್ಷಿಗಳ ನೀರಿನ ದಾಹ ತೀರಿಸಬಹುದು, ವ್ಯರ್ಥವಾಗಿ ಪೋಲಾಗುತ್ತಿದ್ದ ನೀರನ್ನು ನಾವು ವ್ಯವಸ್ಥಿತವಾಗಿ ಸಂಗ್ರ್ರಹಿಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ.

ನರೇಗಾ ಮುಖ್ಯ ಉದ್ದೇಶ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿದೆ. ಈ ಯೋಜನೆ ಮೂಲಕ ನೀರಿನ ಕೊಳ ನಿರ್ಮಾಣ ಮಾಡಲಾಗಿದೆ. ಅಂತರ್ಜಲ ಹೆಚ್ಚಳದ ಜತೆಗೆ ಪ್ರಾಣಿ ಮತ್ತು ಪಕ್ಷಿ ಸೇರಿದಂತೆ ಹಲವು ಜೀವರಾಶಿಗಳ ನೀರಿನ ದಾಹ ಕೂಡ ನೀಗಲಿದೆ. ಶಿವರಾಜಯ್ಯ ತಾಪಂ ಇಒ, ಪಾವಗಡ ಕುರಿ, ಮೇಕೆ, ಜಾನುವಾರುಗಳಿಗೆ ನೀರು ಕುಡಿಸಲು ಕಷ್ಟಕರವಾಗಿತ್ತು. ನೀರಿನ ಕೊಳ ನಿರ್ಮಾಣದಿಂದಾಗಿ ಸಾಕಷ್ಟು ಉಪಕಾರಿಯಾಗಿದೆ. ರಾಮಾಂಜಿನಪ್ಪ, ಕುರಿಗಾಹಿ, ಪಳವಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net