ಗಾವಡಗೆರೆಯಲ್ಲಿ ಪೌತಿ ಖಾತೆ ಆಂದೋಲನ

 ಹುಣಸೂರು ತಾಲುಕು ಗಾವಡಗೆರೆ ಹೋಬಳಿ ಕೇಂದ್ರದಲ್ಲಿ ಪೌತಿ ಖಾತೆ ಆಂದೋಲನದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್ ರೈತರಿಂದ ಅರ್ಜಿ ಸ್ವೀಕರಿಸಿದರು. ಅರುಣ್ ಕುಮಾರ್, ಧನಲಕ್ಷ್ಮೀ ಮಂಜುನಾಥ್ ಮತ್ತಿತರರಿದ್ದರು.
ಹುಣಸೂರು ತಾಲುಕು ಗಾವಡಗೆರೆ ಹೋಬಳಿ ಕೇಂದ್ರದಲ್ಲಿ ಪೌತಿ ಖಾತೆ ಆಂದೋಲನದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್ ರೈತರಿಂದ ಅರ್ಜಿ ಸ್ವೀಕರಿಸಿದರು. ಅರುಣ್ ಕುಮಾರ್, ಧನಲಕ್ಷ್ಮೀ ಮಂಜುನಾಥ್ ಮತ್ತಿತರರಿದ್ದರು.
Published on

ಹುಣಸೂರು: ತಾಲೂಕು ಆಡಳಿತದ ವತಿಯಿಂದ ಗಾವಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಪೌತಿಖಾತೆ ಆಂದೋಲನದಲ್ಲಿ 57ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

ಶುಕ್ರವಾರ ಗಾವಡಗೆರೆಯ ನಾಡಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಜೆ.ಮಂಜುನಾಥ್, ಹಲವು ದಶಕಗಳಿಂದ ಪೌತಿಖಾತೆ ಸಮಸ್ಯೆ ಗ್ರಾಮೀಣರನ್ನು ಕಾಡುತ್ತಿದ್ದು, ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಕಂದಾಯ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳ ಸೂಚನೆ ಅನ್ವಯ ಪೌತಿಖಾತೆ ಆಂದೋಲನ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಹೋಬಳಿ ಕೇಂದ್ರಗಳಲ್ಲಿ ಸತತವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು ಎಂದು ಕೋರಿದರು.

ಈ ಕಾರ್ಯಕ್ರಮ ಇಲ್ಲಿಗೆ ಮುಗಿಯುವುದಿಲ್ಲ ಈಗ ದಾಖಲಾತಿಗಳು ಇಲ್ಲದಿದ್ದರೆ, ನಾಡಕಚೇರಿಗೆ ದಾಖಲೆಗಳಿಗೆ ಅರ್ಜಿ ಸಲ್ಲಿಸಿ ದಾಖಲೆ ಪಡೆದು ಮುಂದಿನ ದಿನಗಳಲ್ಲೂ ಪೌತಿ ಖಾತೆಗೆ ಅರ್ಜಿ ಸಲ್ಲಿಸಬಹುದು. ರೈತರು ತಮ್ಮ ಗ್ರಾಮಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳು ಬಂದಾಗ ಅಲ್ಲಿಯೇ ನೇರವಾಗಿ ಅವರಿಗೆ ಪೌತಿ ಖಾತೆಗೆ ಅರ್ಜಿ ನೀಡಬಹುದು. ಇಲ್ಲದಿದ್ದರೆ ಹೋಬಳಿ ಕೇಂದ್ರದಲ್ಲಿ ಉಪ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಮಂಜುನಾಥ್, ಸದಸ್ಯ ಶ್ರೀನಾಥ್, ಉಪತಹಸಿಲ್ದಾರ್ ಅರುಣ್ ಕುಮಾರ್, ರಾಜಸ್ವ ನಿರೀಕ್ಷಕ ಹೇಮಂತ್ ಕುಮಾರ್ ಹೊಸಳ್ಳಿ, ಗ್ರಾಮ ಆಡಳಿತ ಅಧಿಕಾರಿಗಳಾದ ವಿಜಯ್ ಕುಮಾರ್, ಚೈತ್ರಾ, ಸಿದ್ದರಾಮ ಯಳಸಂಗಿ, ಶ್ರೀವತ್ಸ, ಪಲ್ಲವಿ, ವಿಶಾಲ್, ಶಿವಕುಮಾರ್, ರೈತ ಮುಖಂಡರಾದ ವಿಜಯ್, ಹಿರೀಕ್ಯಾತನಹಳ್ಳಿ ಹರೀಶ್, ಜಾಬಗೆರೆ ರವಿ, ಮಂಚಬಾಯನಹಳ್ಳಿ ಗಣೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net