ಪೌರಗಣಪತಿ ಅದ್ದೂರಿ ವಿಸರ್ಜನಾ ಮೆರವಣಿಗೆ

Koppa &WÜWÜ
ಕೊಪ್ಪ ಪೌರಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ್ದ ವರಸಿದ್ಧಿ ವಿನಾಯಕನ ವಿಸರ್ಜನಾ ಮೆರವಣಿಗೆ ನಡೆಸಲಾಯಿತು.
Published on

ಕೊಪ್ಪ: ಪಟ್ಟಣದ ಪೌರಗಣೇಶೋತ್ಸವ ಸಮಿತಿಯ 49ನೇ ವರ್ಷದ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಿದ ಶ್ರೀ ವರಸಿದ್ಧಿ ವಿನಾಯಕ ವಿಸರ್ಜನಾ ಮೆರವಣಿಗೆ ಗುರುವಾರ ವಿಜೃಂಭಣೆಯಿಂದ ನಡೆಯಿತು.

ವಿಸರ್ಜನಾ ಮೆರವಣಿಗೆಯಲ್ಲಿ ಹುಲಿವೇಷ, ನಾಸಿಕ್ ಡೋಲು, ಕೀಲುಕುದುರೆ, ತಟ್ಟಿರಾಯ, ಬೊಂಬೆಕುಣಿತ, ವಾದ್ಯಮೇಳ ಇನ್ನಿತರ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ವಿನಾಯಕ ಮಂಟಪದಿಂದ ಹೊರಟ ವಿಸರ್ಜನಾ ಮೆರವಣಿಗೆ ಟಾಕೀಸ್ ರಸ್ತೆ, ಬಸ್‌ನಿಲ್ದಾಣ, ಟಿ.ಎಂ.ರಸ್ತೆ, ಸುಭಾಷ್ ರಸ್ತೆ ಮೂಲಕ ಸಾಗಿ ಮುಖ್ಯ ರಸ್ತೆಯ ಮೂಲಕ ಮೇಲಿನ ಪೇಟೆಯ ಗೌರಿಕೆರೆ ತಲುಪಿ ಗೌರಿ ಕೆರೆಯಲ್ಲಿ ವಿನಾಯಕನ ಮೂರ್ತಿಯನ್ನು ವಿಸರ್ಜಿಸಲಾಯಿತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಡಿಜೆ ಸಂಗೀತಕ್ಕೆ ತಕ್ಕಂತೆ ಕುಣಿದರು. ಮೆರವಣಿಗೆಯಲ್ಲಿ ಪೌರಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ನಾಯಕ್, ಕಾರ್ಯಾಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ. ಗೌರವ ಅಧ್ಯಕ್ಷ ಎಲ್.ಎಂ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಬಿ.ಎನ್.ಗೋಪಾಲಕಷ್ಣ ಆಚಾರ್, ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net