ಕರೊನಾ ಸೋಂಕು ತಡೆಯಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಅದ ರಿಂದಾಗಿ ಪ್ರತಿದಿನದ ದುಡಿಮೆಯಲ್ಲಿ ಜೀವನ ಸಾಗಿಸುತ್ತಿದ್ದ ಕಾರ್ವಿುಕರಿಗೆ ಆದಾಯವಿಲ್ಲದಂತಾಗಿದ್ದು, ನಿತ್ಯ ಆಹಾರ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿನ ಕಾರ್ವಿುಕರ ಸ್ಥಿತಿ ಕುರಿತಂತೆ ‘ಮರಾ’ ಸ್ವಯಂ ಸೇವಾ ಸಂಸ್ಥೆ ನಡೆಸಿರುವ ಅಧ್ಯಯನ ಪ್ರಕಾರ ಚಿನ್ನಪ್ಪ ಲೇಔಟ್, ಮಹದೇವಪುರ ಮತ್ತು ದೊಡ್ಡಗುಬ್ಬಿಯಲ್ಲಿನ 1 ಸಾವಿರಕ್ಕೂ ಹೆಚ್ಚಿನ ಕಾರ್ವಿುಕರನ್ನು ಮಾತನಾಡಿಸಲಾಗಿದೆ. ಅವರೆಲ್ಲರಿಗೂ ಲಾಕ್ಡೌನ್ ಘೋಷಣೆಯಾದ ಒಂದೆರಡು ದಿನಗಳಲ್ಲಿ ಬಿಬಿಎಂಪಿ ಆಹಾರ ಕಿಟ್ ವಿತರಿಸಿದ್ದು ಬಿಟ್ಟರೆ ಈವರೆಗೆ ಯಾವುದೇ ರೀತಿಯ ನೆರವು ನೀಡಿಲ್ಲ ಎಂಬುದು ಬೆಳಕಿಗೆ ಬಂದಿದೆ.