ಎಣ್ಮೂರು ಆದಿಗರಡಿಯಲ್ಲಿ ಪತ್ತನಾಜೆ ಆಚರಣೆ

pattanaje
ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಗರಡಿಯಲ್ಲಿ ಶುಕ್ರವಾರ ಪತ್ತನಾಜೆ ಕಾರ್ಯಕ್ರಮ ನಡೆಯಿತು.
Published on

ಸುಬ್ರಹ್ಮಣ್ಯ: ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಗರಡಿಯಲ್ಲಿ ಶುಕ್ರವಾರ ಪತ್ತನಾಜೆ ಕಾರ್ಯಕ್ರಮ ನಡೆಯಿತು.

ಪತ್ತನಾಜೆ ನಿಮಿತ್ತ ಸಂಪ್ರದಾಯ ಪ್ರಕಾರ ಗರಡಿಯಲ್ಲಿ ವಿಶೇಷ ತಂಬಿಲ ಸೇವೆ, ದರ್ಶನ ಸೇವೆ, ಬೈದರುಗಳಿಂದ ಅಭಯ ನುಡಿ ನೆರವೇರಿತು. ನಂತರ ಗಂಧ ಪ್ರಸಾದ ವಿತರಣೆಯಾಗಿ ಭೋಜನ ಪ್ರಸಾದ ನಡೆಯಿತು.

ಕಟ್ಟಬೀಡು ಕುಟುಂಬಸ್ಥರು ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಅವರ ಪತ್ನಿ ಪದ್ಮಾ ಆರ್.ಶೆಟ್ಟಿ ಕಟ್ಟಬೀಡು, ಗರಡಿ ಮಾಹಿತಿದಾರ ಎನ್.ಜಿ.ಲೋಕನಾಥ ರೈ ಎಣ್ಮೂರು, ಎಣ್ಮೂರುಗುತ್ತು, ಭಕ್ತರು ಉಪಸ್ಥಿತರಿದ್ದರು.

ಪತ್ತನಾಜೆ ಕಾರ್ಯಕ್ರಮ ನಡೆದ ಮೂರು ತಿಂಗಳು ಬಾಗಿಲು ಗರಡಿಯ ತೆರೆಯುವಂತಿಲ್ಲ. ಭಕ್ತರು ಆಗಮಿಸಿ ಮನಸಿನ ಕೋರಿಕೆ ಹಾಗೂ ಬೇಡಿಕೆ ಗರಡಿ ಚಾವಡಿಯಲ್ಲಿ ಮನಸಿನ ಕೋರಿಕೆಯಂತೆ ಪ್ರಾರ್ಥನೆ ಸಲ್ಲಿಸಬಹುದು. ದಿನ ಮುಂಚೆ ತಿಳಿಸಿದಲ್ಲಿ ಪ್ರಾರ್ಥನೆ ಮಾಡಲಾಗುವುದು. ಚೌತಿ ದಿನದಂದು ಬಾಗಿಲು ತೆರೆದು ಚೌತಿ ಆಚರಣೆ ವಿಶೇಷ ಪೂಜೆ, ಪ್ರಾರ್ಥನೆಗೆ ಅವಕಾಶವಿದೆ ಎಂದು ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net