ಕಾಂಗ್ರೆಸ್‌ನಿಂದ ಮತೀಯ ಶಕ್ತಿಗಳ ಪೋಷಿಸುವ ಕೆಲಸ: ಆರೋಪ

Published on

ಮೈಸೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಮತೀಯ ಶಕ್ತಿಗಳನ್ನು ಪೋಷಿಸುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ ಮಹೇಶ್ ಆರೋಪಿಸಿದರು.
ದಿನದಿಂದ ದಿನಕ್ಕೆ ಮತೀಯ ಶಕ್ತಿಗಳ ದೌರ್ಜನ್ಯ ಹೆಚ್ಚಾಗಿದೆ. ಹಿಂದುಗಳಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಟೂಲ್ ಕಿಟ್‌ಗಳು ಕೆಲಸ ಮಾಡುತ್ತಿವೆ. ಹನುಮಾನ್ ಚಾಲೀಸ ಹೇಳಿದವರ ಮೇಲೆ ಹಲ್ಲೆ ನಡೆಯುತ್ತಿವೆ. ಜೈ ಶ್ರೀರಾಮ್ ಎಂದರೆ ಹಲ್ಲೆ ಮಾಡುತ್ತಿದ್ದಾರೆ. ಇಂತಹ ಘಟನೆಗಳಿಗೆ ಸರ್ಕಾರ ನೇರ ಹೊಣೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ ಇವರನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಮೂಲಕ ಅಶಾಂತಿ ಉಂಟು ಮಾಡಿದ್ದರು. ಬಾಂಬ್ ಸ್ಫೋಟ ಮಾಡಿದವರನ್ನು ನಮ್ಮ ಬ್ರದರ್ಸ್ ಅನ್ನುತ್ತಾರೆ. ನೇಹಾ ಪ್ರಕರಣದಲ್ಲಿ ಜಿಹಾದಿ ಪ್ರಕರಣ ಅಲ್ಲ ಎಂದು ಸಿಎಂ ಹೇಳುತ್ತಾರೆ. ಹಿಂದುಗಳಲ್ಲಿ ಭಯ ಮೂಡಿಸಬೇಕು, ಭಯದಿಂದ ಬದುಕುವ ನಿರ್ಮಾಣ ಮಾಡುವಂತಹ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net