ಕುಶಲಕರ್ಮಿಗಳ ಪೋಷಕ ದೇವರು

naregal
Published on

ನರೇಗಲ್ಲ: ಪುರಾಣಗಳ ಪ್ರಕಾರ ವಿಶ್ವಕರ್ಮ ಅವರೊಬ್ಬ ಅಪ್ರತಿಮ ವಾಸ್ತುಶಿಲ್ಪಿ. ತಂತ್ರಜ್ಞಾನ ಬಲ್ಲ ಹಿಂದು ದೇವರು. ಅಸಾಧಾರಣ ಅರಮನೆಗಳಿಂದ ಹಿಡಿದು ದೇವರ ಆಯುಧಗಳು, ದೇವತೆಗಳಿಗೆ ಹಾರುವ ರಥಗಳವರೆಗೆ ಎಲ್ಲವನ್ನು ಸೃಷ್ಟಿಸಿದ ವಿನ್ಯಾಸಕರಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ ಹೇಳಿದರು.

ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಕೃಷ್ಣನಿಗಾಗಿ ದ್ವಾರಕ ನಗರ, ಪಾಂಡವರಿಗಾಗಿ ಇಂದ್ರಪ್ರಸ್ಥದ ಅರಮನೆ ಮತ್ತು ದೇವರಿಗಾಗಿ ಅನೇಕ ಅದ್ಭುತ ಆಯುಧಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರನ್ನು ಎಲ್ಲ ಕುಶಲಕರ್ಮಿಗಳ ಪೋಷಕ ದೇವರು ಎಂದು ಪರಿಗಣಿಸಲಾಗುತ್ತದೆ. ವಿಶ್ವಕರ್ಮ ಪೂಜೆಯ ಸಂದರ್ಭದಲ್ಲಿ ಅವರ ಗೌರವಾರ್ಥ ವ್ಯಾಪಾರದ ಉಪಕರಣಗಳನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ ಎಂದರು.

ವಿ. ಪಿ. ಗ್ರಾಮಪುರೋಹಿತ, ಎಸ್.ವಿ. ಹಿರೇಮಠ, ವಿ.ಎಸ್. ಜಾಧವ, ಎಸ್.ಕೆ. ಕುಲಕರ್ಣಿ, ಸಾವಿತ್ರಿ ಮಾನ್ವಿ, ಎಂ.ಎಂ. ಶಿಳ್ಳಿನ, ಗೀತಾ ಶಿಂಧೆ, ಕೆ.ಐ. ಕೋಳಿವಾಡ, ಐ.ಬಿ. ಒಂಟೇಲಿ, ಎನ್.ಜೆ. ಸಂಗನಾಳ, ಜೆ.ವಿ. ಕೆರಿಯವರ, ಅಕ್ಕಮಹಾದೇವಿ ಅಯ್ಯನಗೌಡ್ರ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ಎಂ.ಎಸ್. ಧರ್ಮಾಯತ , ಎಸ್.ಎ. ಚೋಳಿನ, ಪಿ.ಎಸ್. ಅಂಗಡಿ, ಪದ್ಮಾವತಿ ಅಂಬಿಗೇರ, ಶ್ವೇತಾ ಹಿರೇಮಠ, ನೇತ್ರಾ ಸೋಬಾನದ, ನಂದಿತಾ ರಾಜೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net