ತ್ಯಾಜ್ಯ ಸುರಿಯುವವರ ಪತ್ತೆಗೆ ಗಸ್ತು

majuru
ಮಜೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಪ್ರಸಾದ್ ಶೆಟ್ಟಿ ವಳದೂರು, ಡಾ.ಅರುಣ್ ಕುಮಾರ್ ಹೆಗ್ಡೆ, ಮಂಜುಳಾ ಆಚಾರ್ಯ, ವನಿತಾ, ಸಂದೀಪ್ ಕುಮಾರ್, ಮಧುಸೂಧನ್ ಸಾಲ್ಯಾನ್, ಸಹನಾ ತಂತ್ರಿ, ವಿಜಯ್ ಧೀರಜ್, ಭಾಸ್ಕರ್, ಜ್ಯೋತಿ, ಜಿತೇಶ್ ಶೆಟ್ಟಿ, ವಿಲಾಸಿನಿ, ಪ್ರಸಾದ್ ಭಂಡಾರಿ, ಲೆಸ್ಟರ್ನ್ ಕರ್ನೇಲಿಯೋ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪಾಲಮೆ ರಸ್ತೆಗೆ 2 ಸಿಸಿ ಕ್ಯಾಮರಾ ಅಳವಡಿಕೆಗೆ ಅನುದಾನ ಮೀಸಲಿಡಲಾಗಿದೆ. ಹತ್ತು ಮಂದಿಯ ತಂಡ ಸಿದ್ಧಪಡಿಸಿ ಕಸ, ತ್ಯಾಜ್ಯ ತಂದು ಸುರಿಯುವವರ ಪತ್ತೆಗೆ ಗಸ್ತುವಿಗೆ ವ್ಯವಸ್ಥೆ ಮಾಡುವುದಾಗಿ ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು ಭರವಸೆ ನೀಡಿದರು.

ಮಜೂರು ಗ್ರಾಪಂ ಸಭಾಭವನದಲ್ಲಿ ಗ್ರಾಪಂ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ನಿತ್ಯಾನಂದ ನಾಯಕ್ ಹೇರೂರು ಅವರು ಪಾಲಮೆ ರಸ್ತೆ ದುರಸ್ತಿಯಾಗಿದ್ದೇ ತಪ್ಪು ಎಂಬಂತೆ ಜನರು ರಸ್ತೆಯ ಇಕ್ಕೆಲಗಳಲ್ಲಿ ಕಸ, ತ್ಯಾಜ್ಯ ಎಸೆಯುತ್ತಿದ್ದಾರೆ. ಕೇಟರಿಂಗ್‌ನವರು ತ್ಯಾಜ್ಯ ತಂದು ಸುರಿಯುತ್ತಾರೆ. ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂಬ ದೂರಿಗೆ ಉತ್ತರಿಸಿದರು.

ಮಜೂರು ಗ್ರಾಪಂ ವ್ಯಾಪ್ತಿಯ ಹೇರೂರು ಬಂಟಕಲ್ಲು ರಸ್ತೆ ತೀರಾ ನಾದುರಸ್ತಿಯಲ್ಲಿದೆ. ಪಂಚಾಯಿತಿ ತುರ್ತಾಗಿ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕಿದೆ ಎಂದು ಪ್ರಕಾಶ್ ನಾಯಕ್ ಒತ್ತಾಯಿಸಿದರು. ಶಾಸಕರ ನಿಧಿಯಿಂದ ಈಗಾಗಲೇ 20 ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಕಾಪು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಹೆಗ್ಡೆ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವನಿತಾ, ಅಂಗನವಾಡಿ ಇಲಾಖೆ ಮೇಲ್ವಿಚಾರಕಿ ಪೂರ್ಣಿಮಾ, ಸದಸ್ಯರಾದ ಸಂದೀಪ್ ಕುಮಾರ್, ಮಧುಸೂಧನ್ ಸಾಲ್ಯಾನ್, ಸಹನಾ ತಂತ್ರಿ, ವಿಜಯ್ ಧೀರಜ್, ಭಾಸ್ಕರ್, ಜ್ಯೋತಿ, ಜಿತೇಶ್ ಶೆಟ್ಟಿ, ಪಿಡಿಒ ವಿಲಾಸಿನಿ, ಕಾರ್ಯದರ್ಶಿ ಪ್ರಸಾದ್ ಭಂಡಾರಿ, ಗ್ರಾಮಕರಣಿಕ ಲೆಸ್ಟರ್ನ್ ಕರ್ನೇಲಿಯೋ ಉಪಸ್ಥಿತರಿದ್ದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನವಹಿಸುವ ಅಗತ್ಯವಿದೆ. ವಿವಿಧ ಇಲಾಖಾಧಿಕಾರಿಗಳು ಇಲಾಖಾವಾರು ಸೌಲಭ್ಯ, ಪ್ರಗತಿ, ಯೋಜನೆ ಕುರಿತಾಗಿ ಮಾಹಿತಿ ನೀಡಿದರು. ಸಾರ್ವಜನಿಕರು ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಪೂರ್ಣಿಮಾ ಅಂಗನವಾಡಿ ಇಲಾಖೆ ಮೇಲ್ವಿಚಾರಕಿ https://www.vijayavani.net/handing-over-of-grants-to-meritorious-students https://www.vijayavani.net/it-is-a-blessing-to-see-srinivas-kalyanas-eyes-filled-with-happiness

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net