

ಚಿಕ್ಕೋಡಿ: ಪಟ್ಟಣದಲ್ಲಿನ ಉದ್ಯಾನ, ನಗರ ಮತ್ತು ವೃತ್ತಕ್ಕೆ ಅಪ್ರತಿಮ ದೇಶಭಕ್ತರ ಹೆಸರು ಇಡುವ ಮೂಲಕ ಮಹಾಪುರುಷರ ಸ್ಮರಣೆಗೆ ಚಿಕ್ಕೋಡಿ ಪುರಸಭೆ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸಂತಸ ತಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕರು ಅರವಿಂದರಾವ ದೇಶಪಾಂಡೆ ಹೇಳಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸರ್ದಾರ ವಲ್ಲಭಭಾಯಿ ಉದ್ಯಾನ, ವೀರ ಸಾವರ್ಕರ ನಗರದ ನಾಮಫಲಕ, ಡಾ.ಕೇಶವ ಬಲಿರಾಮಪಂತ ಹೆಡಗೇವಾರ ವೃತ್ತ ಹಾಗೂ ಶ್ರೀ ವೀರ ಸಾವರ್ಕರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕೋಡಿ ಪಟ್ಟಣ ಸ್ವಚ್ಛ ಮತ್ತು ಸುಂದರವಾಗಿರಲು ಉದ್ಯಾನ ನಿರ್ಮಾಣ ಅವಶ್ಯ ಎಂದರು.
ಬೆಳಗಾವಿ ವೀರವಾಣಿ ಸಾಪ್ತಾಹಿಕ ವ್ಯವಸ್ಥಾಪಕ ರಾಮಚಂದ್ರ ಏಡಕೆ ಮಾತನಾಡಿ, ದೇಶಕ್ಕೆ ದುಡಿದ ಅಪ್ರತಿಮ ನಾಯಕರ ಹೆಸರು ಅಮರವಾಗಿಸಲು ಸಂಸ್ಥೆ, ವೃತ್ತಕ್ಕೆ ನಾಮಕರಣ ಮಾಡುವ ಮೂಲಕ ದೇಶ ಭಕ್ತರನ್ನು ಸ್ಮರಿಸಿದಂತಾಗಿದೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ವಿಭಾಗದ ಸಹಕಾರ್ಯವಾಹಕ ಸಂಜಯ ಅಡಕೆ ಹಾಗೂ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಳಗಾವಿ ಜಿಲ್ಲಾ ಕಾರ್ಯವಾಹಕ ಎಂ.ವೈ.ಹಾರೂಗೇರಿ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ರಾಮಚಂದ್ರ ಬನ್ನಟ್ಟಿ, ಪ್ರಕಾಶ ಲಂಗೋಟೆ, ಧನ್ಯಕುಮಾರ ಗುಂಡೆ, ಪ್ರಶಾಂತ ಕಾಳಿಂಗೆ, ಶಾಂಭವಿ ಅಶ್ವತ್ಥಪುರ, ಶಕುಂತಲಾ ಡೋಣವಾಡೆ, ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ ಇದ್ದರು. ರಾಜಶೇಖರ ಚಿತ್ತವಾಡಗಿ ಸ್ವಾಗತಿಸಿದರು. ದೀಪಕ ಚೊನ್ನದ ವಂದಿಸಿದರು.