ಯುವಕರಲ್ಲಿ ದೇಶಾಭಿಮಾನ ಮೂಡಿಸಬೇಕಿದೆ

h7-Rath yatra 1
Published on

ಹುಬ್ಬಳ್ಳಿ: ವಿಶ್ವ ಹಿಂದು ಪರಿಷತ್, ಭಜರಂಗದಳ ಹುಬ್ಬಳ್ಳಿ ಮಹಾನಗರ ಜಿಲ್ಲೆ ವತಿಯಿಂದ ನಗರದ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಶನಿವಾರ ಶೌರ್ಯ ಜಾಗರಣ ಯಾತ್ರೆಯನ್ನು ಉದ್ಘಾಟಿಸಲಾಯಿತು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಿಂದೆಲ್ಲ ಗರಡಿ ಮನೆಗಳಿದ್ದವು. ಬೆಳಗ್ಗೆ ಎದ್ದ ತಕ್ಷಣ ಇವರೆಲ್ಲ ದೇಸಿ ಆಕಳ ಹಾಲು ಕುಡಿಯುತ್ತಿದ್ದರು. ರೊಟ್ಟಿ, ಕೆಂಪ್ ಚಟ್ನಿ, ಬೆಣ್ಣೆ ಸವರಿ ಊಟ ಮಾಡುತ್ತಿದ್ದರು. ಈಗ ಊಟದ ಮೆನ್ಯೂ ಬದಲಾಗಿದೆ. ದೇಹಾಕೃತಿ ಬದಲಾಗುವುದಿಲ್ಲ. ದೇಶಭಿಮಾನ ಬೆಳೆಯುವುದಿಲ್ಲ. ಈಗಿನ ಯುವಕರಿಗೆ ಈ ಬಗ್ಗೆ ತಿಳಿಹೇಳಬೇಕು. ಇದರಿಂದ ರಾಷ್ಟ್ರಪ್ರೇಮ ತನ್ನಿಂದತಾನೇ ಉಗಮವಾಗಲಿದೆ ಎಂದರು.

ವಿಎಚ್​ಪಿ ಧಾರವಾಡ ವಿಭಾಗದ ಕಾರ್ಯದರ್ಶಿ ವಿನಾಯಕ ತಲಗೇರಿ ಮಾತನಾಡಿ, ಸ್ವಾಭಿಮಾನ ಹಾಗೂ ಸನಾತನ ಭಾರತ ಉಳಿಸುವ ನಿಟ್ಟಿನಲ್ಲಿ ಯಾತ್ರೆ ಆರಂಭಿಸಲಾಗಿದೆ. ಯುವಕರ ಮನಸ್ಸಿನಲ್ಲಿನ ಕಂದಕ ಹೋಗಲಾಡಿಸಿ, ದೇಶಾಭಿಮಾನ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಎಚ್​ಪಿ ಪ್ರಾಂತ ಅಧ್ಯಕ್ಷ ಡಾ.ಎಸ್.ಆರ್. ರಾಮನಗೌಡರ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಮಹೇಶ ನಾಲವಾಡ, ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ವಿಎಚ್​ಪಿ ಮಹಾನಗರ ಅಧ್ಯಕ್ಷ ಸಂಜೀವ ಬಡಸ್ಕರ್, ಮಾತಾಶ್ರಾಮದ ಶ್ರೀ ತೇಜೋಮಯಿ ಮಾತಾಜಿ, ಜಯತೀರ್ಥ ಕಟ್ಟಿ, ಉಮೇಶ ದುಶಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net