ದೇಶಾಭಿಮಾನ ಬೆಳೆಸಿಕೊಳ್ಳಬೇಕು

17itagi2
Published on

ಇಟಗಿ: ಸಮೀಪದ ಬೈಲೂರ ಗ್ರಾಪಂನಲ್ಲಿ ಶುಕ್ರವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಮಂಜುನಾಥ ಮರೆಪ್ಪಗೋಳ ಧ್ವಜಾರೋಹಣ ನೆರವೇರಿಸಿದರು.

ಗ್ರಾಪಂ ಕಾರ್ಯದರ್ಶಿ ಬಸವಣ್ಣೆಪ್ಪ ಅಂಬಡಗಟ್ಟಿ, ಉಪಾಧ್ಯಕ್ಷ ಮಹಾದೇವಿ ಮಾಳಗಿ, ಸದಸ್ಯರಾದ ಬಸವರಾಜ ಲದ್ದಿಮಠ, ವಿಠ್ಠಲ ಅಗಸಿಮನಿ, ಸಂಗಮೇಶ ಹಿರೇಮಠ, ಬಸವರಾಜ ನಾಯ್ಕರ, ಬಿಬಿಜಾನ್ ಗಡಾದ, ವಿಜಯ ಅಂಕಲಗಿಮಠ, ಸರೋಜಿನಿ ಕ್ಯಾಸಗೇರಿ, ಅನ್ನಪೂರ್ಣಾ ಹಿರೇಮಠ, ಯಲ್ಲವ್ವ ಚನ್ನಬಸಪ್ಪನವರ, ನೀಲವ್ವ ಓನಕಿ ಇತರರಿದ್ದರು.

ನಾಗೇಶ ಬೆಣ್ಣೆ ನಿರೂಪಿಸಿದರು. ಮಹಾಂತೇಶ ಇಟಗಿ ಸ್ವಾಗತಿಸಿದರು. ಶಶಿಧರ ಗಂಡಲಾಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net