

ಕಾರವಾರ: ಪತ್ರಕರ್ತರ ಅವಿರತ ಶ್ರಮದ ಹಿಂದೆ ಅವರ ಕುಟುಂಗಳ ಸಹಕಾರವೂ ದೊಡ್ಡದು ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.
ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಕೇಂದ್ರ ಕಾರ್ಯ ನಿರತ ಪತ್ರಕರ್ತರ ಸಂಘ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ದೊಡ್ಡದಿದೆ. ಇಲ್ಲಿ ಪತ್ರಕರ್ತರಾಗಿ, ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ದೊಡ್ಡ ಸವಾಲು. ಆದರೂ ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಬರುವ ಸುದ್ದಿಯನ್ನು ನಾವು ಫಾಲೋ ಅಪ್ ಮಾಡಿ, ಸಮಸ್ಯೆ ಸರಿಪಡಿಸಲು ಶ್ರಮಿಸುತ್ತಿದ್ದೇನೆ ಎಂದರು.
ಸರ್ಕಾರದ ಮಟ್ಟದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಉತ್ತಮ ಹೆಸರಿದೆ. ಸರ್ಕಾರಿ ಯೋಜನೆಗಳ ಜಾರಿಯಲ್ಲಿ ಉತ್ತರ ಕನ್ನಡ ಟಾಪ್ 10 ಪಟ್ಟಿಯಲ್ಲಿದೆ ಎಂದರು.
ಅತಿತಿಯಾಗಿದ್ದ ಜಿಪಂ ಸಿಇಒ ದಿಲೀಶ್ ಶಶಿ ಮಾತನಾಡಿ, ಮಾಧ್ಯಮ ಎಂದರೆ ಸಾಮಾನ್ಯವಾಗಿ ನಕಾರಾತ್ಮಕ ವರದಿಗಳು ಹೆಚ್ಚು. ಆದರೆ, ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ಸಕಾರಾತ್ಮಕ ವರದಿಗೆ ಹೆಚ್ಚು ಒತ್ತು ನೀಡುವುದು ಸಂತೋಷದ ಸಂಗತಿ ಎಂದರು. ಎಸ್‌ಪಿ ದೀಪನ್ ಎಂ.ಎನ್.ಮಾತನಾಡಿ, ಸ್ವಾತಂತ್ರ÷್ಯ ಹೋರಾಟದ ಕಾಲದಿಂದಲೂ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಜಿಲ್ಲಾ ವಾರ್ತಾಽಕಾರಿ ಶಿವಕುಮಾರ್, ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಭರತರಾಜ್ ವೇದಿಕೆಯಲ್ಲಿದ್ದರು. ವಿನುತಾ ಅಂಬೇಕರ್ ಪ್ರಾರ್ಥಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಉದಯ ಬರ್ಗಿ ವಂದಿಸಿದರು. ಕಾರವಾರ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ 12 ಜನ ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ಪ್ರದಾನ
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಟ್ಯಾಗೋರ್ ಪ್ರಶಸ್ತಿಯನ್ನು ದಿಲೀಪ್ ರೇವಣಕರ್, ಎಸ್.ಎಸ್.ಸಂದೀಪ ಸಾಗರ, ಭರತರಾಜ್ ಕಲ್ಲಡ್ಕ ಅವರಿಗೆ ಪ್ರದಾನ ಮಾಡಲಾಯಿತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಶಾಖೆಯಿಂದ ನೀಡುವ ಹರ್ಮನ್ ಮೋಗ್ಲಿಂಗ್ ಪ್ರಶಸ್ತಿಯನ್ನು ನಾಗರಾಜ ಹರಪನಹಳ್ಳಿ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪಡೆದ ಶೇಷಗಿರಿ ಮುಂಡಳ್ಳಿ ಹಾಗೂ ದೀಪಕ ಕುಮಾರ ಶೇಣ್ವಿ ಅವರನ್ನು ಸನ್ಮಾನಿಸಲಾಯಿತು.