

ಮಂಗಳೂರು : ಯಕ್ಷಗಾನ ಕಲೆಯ ಪ್ರದರ್ಶನವನ್ನು ಅಮೆರಿಕಾ ದೇಶದಲ್ಲಿ ಕೈಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್
ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಫೀನಿಕ್ಸ್ ನಗರದಲ್ಲಿ ಪ್ರದರ್ಶನ ನೀಡಿತ್ತು. ಅಲ್ಲಿನ ಮೇಯರ್ ಪ್ರದರ್ಶನದ ದಿನವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದರು. ಕಳೆದ ತಿಂಗಳು ವಿಸ್ಕಾನ್ಸಿನ್ನ ಬ್ರೂಕ್ಫೀಲ್ಡ್ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿತ್ತು.
ಆಗ ಬ್ರೂಕ್ಫೀಲ್ಡ್ನ ಮೇಯರ್ ಸ್ಟೀವನ್ ವಿ ಪೋಂಟೊ ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ ಎಂದು ಘೋಷಿಸಿದ್ದರು.
ಈ ಸಾಧನೆಗೆ ಬೆಂಬಲ ನೀಡಿದ ಮಿಲ್ವಾಕೀ ಕನ್ನಡ ಸಂಘ ಧನ್ಯವಾದಗಳನ್ನು ಅರ್ಪಿಸುವುದಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
.......................