ಮೆಡಿಕಲ್ ಸ್ಟೋರ್ ಬಂದ್‌ನಿಂದ ಪರದಾಡಿದ ರೋಗಿಗಳು

18.2a
ಹೊಳೆನರಸೀಪುರ ಪಟ್ಟಣದ ಪ್ರಮುಖ ಔಷಧ ಅಂಗಡಿಗಳು ವಾಸವಿ ಜಯಂತಿ ಅಂಗವಾಗಿ ಬಾಗಿಲು ಮುಚ್ಚಿದ್ದವು.
Published on

ಹೊಳೆನರಸೀಪುರ: ಪಟ್ಟಣದಲ್ಲಿ ಶನಿವಾರ ಬಹುತೇಕ ಪ್ರಮುಖ ಔಷಧ ಅಂಗಡಿಗಳು ಬಂದ್ ಆಗಿದ್ದು ರೋಗಿಗಳು ಔಷಧ ಸಿಗದೆ ಪರದಾಡಿದರು.

ಶನಿವಾರ ಆರ್ಯವೈಶ್ಯ ಜನಾಂಗದವರು ವಾಸವಿ ಜಯಂತಿ ಆಚರಿಸಿದರು. ಹಾಗಾಗಿ ಪಟ್ಟಣದಲ್ಲಿ ಆರ್ಯವೈಶ್ಯ ಜನಾಂಗದವರು ನಡೆಸುವ ಔಷಧ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳು ಬಂದ್ ಆಗಿದ್ದವು. ಬೇರೆ ಯಾವುದೇ ಅಂಗಡಿ ತೆಗೆಯದಿದ್ದರೂ ತೊಂದರೆ ಇಲ್ಲ. ಆದರೆ ಪಟ್ಟಣದಲ್ಲಿ ಇರುವ ಔಷಧ ಅಂಗಡಿಗಳ ಪೈಕಿ 10 ಪ್ರಮುಖ ಔಷಧ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ರೋಗಿಗಳು ಪರದಾಡುವಂತಾಯಿತು.

ಪಟ್ಟಣದಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆದಾಗ, ಬಂದ್ ಆದಾಗ ರೋಗಿಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶಕ್ಕೆ ಔಷಧ ಅಂಗಡಿಗಳಿಗೆ ವಿನಾಯಿತಿ ಇರುತ್ತದೆ. ಆದರೆ ಶನಿವಾರ ಔಷಧ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ನಮಗೆ ತೊಂದರೆಯಾಯಿತು ಎಂದು ಕೆಲವರು ಬೇಸರ ವ್ಯಕ್ತಪಡಿಸಿದು.

ಆರ್ಯವೈಶ್ಯ ಜನಾಂಗದವರ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಔಷಧ ಅಂಗಡಿಗಳು ತೆರೆದಿದ್ದವು. ಇದರಿಂದ ಕೆಲವರು ಉಳಿದ ಔಷಧ ಅಂಗಡಿಗಳಲ್ಲಿ ಖರೀದಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net