ರೋಗಿಗಳ ಸುರಕ್ಷತೆ ವೈದ್ಯರ ಆದ್ಯ ಕರ್ತವ್ಯವಾಗಲಿ

29 Dwd 5
Published on

ಧಾರವಾಡ: ರೋಗಿಗಳ ಸುರಕ್ಷತೆಯೇ ವೈದ್ಯರ ಆದ್ಯ ಕರ್ತವ್ಯವಾಗಿರಬೇಕು. ಸುರಕ್ಷತೆಯ ಕುರಿತು ಸೂಕ್ತ ಮಾರ್ಗಸೂಚಿ ತಯಾರಿಸಿ ಅದನ್ನು ಅನುಸರಿಸಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ್ ಹೇಳಿದರು.
ನಗರದ ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ರೋಗಿಗಳ ಸುರಕ್ಷತಾ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳ ಸುರಕ್ಷತಾ ಸಪ್ತಾಹದ ಅಂಗವಾಗಿ ವೈದ್ಯರು, ವಿದ್ಯಾರ್ಥಿಗಳಿಗೆ ಮತ್ತು ಶುಶ್ರೂಷೆ ಸಿಬ್ಬಂದಿಗೆ ಏರ್ಪಡಿಸಿದ್ದ ಭಿತ್ತಿಪತ್ರ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅತೀ ತೀವ್ರ ನಿಗಾ ಘಟಕವನ್ನು (ಕ್ರಿಟಿಕಲ್ ಕೇರ್ ವಿಭಾಗ) ರೋಗಿಗಳ ಸುರಕ್ಷತೆಯಲ್ಲಿ ಅತ್ಯುತ್ತಮ ವಿಭಾಗವಾಗಿ ಪರಿಗಣಿಸಲಾಯಿತು. ಉಪ ವೈದ್ಯಕೀಯ ಅಽÃಕ್ಷಕರಾದ ಡಾ. ಮಖ್ದೂಮ ಕಿಲ್ಲೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಐಶ್ವರ್ಯಾ ಸ್ವಾಗತಿಸಿದರು. ಗುಣಮಟ್ಟ ಪರಿಶಿಲನಾ ಅಽಕಾರಿ ನಿಶಾಂತ್ ಜೈನ್ ನಿರ್ವಹಿಸಿದರು. ಡಾ. ಅಭಿಷೇಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net