ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ

14KUDLIGI2
ಕೂಡ್ಲಿಗಿ ಪಟ್ಟಣದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಕಾರ್ಯಕ್ರಮನದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸದಸ್ಯರಾದ ಢಾಣಿ ಚೌಡಮ್ಮ, ಬಾಸೂ ನಾಯ್ಕ, ಡಿಎಚ್‌ಒ ಡಾ.ಶಂಕರ್ ನಾಯ್ಕ, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಇದ್ದರು.
Published on

ಕೂಡ್ಲಿಗಿ; ಇರುವ ಸಮಯದಲ್ಲಿಯೇ ಉತ್ತಮ ಸೇವೆ ನೀಡಿ, ಜನರ ಆರೋಗ್ಯ ಸುಧಾರಿಸಿ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶುಕ್ರವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.b ರೋಗಿಗಳನ್ನು ತಾಳ್ಮೆಯಿಂದ ನೋಡಿಕೊಳ್ಳಬೇಕು. ಆಸ್ಪತ್ರೆ ಬಗ್ಗೆ ನಿತ್ಯ ದೂರು ಬರುತ್ತವೆ. ನೀವು ಸರಿಯಾಗಿ ತಿಳಿ ಹೇಳಿದರೆ ಸಮಸ್ಯೆ ಸರಿಪಡಿಸಬಹುದು.

ದೂರುಗಳು ಕಡಿಮೆಯಾದಷ್ಟು ಜನರ ಆರೋಗ್ಯ ಕಾಪಾಡುತ್ತೇವೆ ಎಂದು ಅರ್ಥ. ಜನರು ನಮ್ಮಿಂದ ಹೆಚ್ಚಿನ ಸೇವೆ ನಿರೀಕ್ಷೆ ಮಾಡುತ್ತಾರೆ. ಯಾವುದೇ ಸಂದರ್ಭದಲ್ಲಿ ರೋಗಿಗಳು ಆಸ್ಪತ್ರೆಗೆ ಬಂದರು ಮೊದಲು ಅವರಿಗೆ ಶುಶ್ರೂಷೆ ಮಾಡಿ ಇರುವ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿ. ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ಕೂಡ್ಲಿಗಿ ಹಾಗೂ ಉಜ್ಜನಿ ಭಾಗದ ಆರೋಗ್ಯ ಸಿಬ್ಬಂದಿಗೆ ಈ ತಿಂಗಳಲ್ಲಿಯೇ ಸನ್ಮಾನ ಏರ್ಪಡಿಸಲಾಗುವುದು ಎಂದರು.

ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿದರು. ಜಿಲ್ಲಾ ಆರೋಗ್ಯಧಿಕಾರಿ ಡಾ.ಎಲ್.ಶಂಕರ್ ನಾಯ್ಕ, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್, ಕಿರಿಯ ಆರೋಗ್ಯ ನಿರೀಕ್ಷಕಿಯರಾದ ಕೆ.ಸುನೀತಾ, ಪಿ.ಬಿ.ಗಿರಿಜಾ, ಭವ್ಯ, ನಮ್ಮ ಕ್ಲಿನಿಕ್ ವೈದ್ಯ ಡಾ.ಮಮತ, ಪಪಂ ಸದಸ್ಯರಾದ ಡಾಣಿ ಚೌಡಮ್ಮ, ಬಾಸೂ ನಾಯ್ಕ, ಸಚಿನ್ ಕುಮಾರ್, ಸಿರಿಬಿ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net