ರಸ್ತೆ ಅಪಘಾತದಲ್ಲಿ ರೋಗಿ ಸಾವು

crime
Published on

ಹುಬ್ಬಳ್ಳಿ: ತಾಲೂಕಿನ ಕೊಟಗೊಂಡಹುಣಸಿ ಗ್ರಾಮ ಬಳಿಯ ಕುಂದಗೋಳ ಕ್ರಾಸ್ ಸೇತುವೆಯಲ್ಲಿ ಮುಂದೆ ಹೋಗುತ್ತಿದ್ದ ಆಂಬುಲೆನ್ಸ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ರೋಗಿ ಮೃತಪಟ್ಟು, ಇಬ್ಬರು ಮಹಿಳೆಯರು ಸೇರಿ ಮೂವರು ಗಾಯಗೊಂಡಿರುವ ಘಟನೆ ಭಾನುವಾರ ಸಂಭವಿಸಿದೆ.

ಬ್ಯಾಡಗಿ ತಾಲೂಕು ಕಾಗಿನೆಲೆಯ ವಿದ್ಯಾರ್ಥಿ ನಸ್ರುಲ್ಲಾ ಇಸಾಕ್‌ಅಹ್ಮದ ಬ್ಯಾಡಗಿ (18) ಮೃತಪಟ್ಟಿದ್ದಾರೆ. ಹಾವೇರಿಯಿಂದ ಹುಬ್ಬಳ್ಳಿ ಕಡೆ ವೇಗವಾಗಿ ಬರುತ್ತಿದ್ದ ಮಹಾರಾಷ್ಟ್ರ ಮೂಲದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಅಂಬುಲೆನ್ಸ್‌ಗೆ ಡಿಕ್ಕಿ ಹೊಡೆದಾಗ ಅದು ಮುಂದೆ ಹೊರಟಿದ್ದ ಕಾರ್‌ಗೆ ಗುದ್ದಿದೆ. ಈ ವೇಳೆ ಅಂಬುಲೆನ್ಸ್‌ನಲ್ಲಿದ್ದ ನಸ್ರುಲ್ಲಾ ಸೇರಿದಂತೆ ಅವರ ತಂದೆ ಇಸಾಕ್‌ಅಹ್ಮದ, ತಾಯಿ ಬಿಬಿನಾಬಿ ಮತ್ತು ಅಕ್ಕ ಸಾನಿಯಾ ಗಾಯಗೊಂಡಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ನಸ್ರುಲ್ಲಾ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಮುಂಚೆ ಇದ್ದ ಕಾಯಿಲೆಯಿಂದಾಗಲಿ ಅಥವಾ ಅಪಘಾತದಲ್ಲಾದ ಗಾಯದಿಂದಾಗಲಿ ಮೃತಪಟ್ಟಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net