

ಹುಬ್ಬಳ್ಳಿ: ಇಲ್ಲಿಯ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಯುವಕನೊಬ್ಬ ಮೂರನೇ ಮಹಡಿಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಭವಿಸಿದೆ.
ನೇಕಾರನಗರದ ನಿವಾಸಿ ಆದರ್ಶ ಗೊಂದಕರ ಆತ್ಮಹತ್ಯೆ ಮಾಡಿಕೊಂಡ ಯುವಕ. ಜ್ವರ ಬಂದಿದ್ದರಿಂದ ಕೆಎಂಸಿಆರ್‌ಐನಲ್ಲಿ ದಾಖಲಾಗಿದ್ದ. ಮನನೊಂದು ಆಸ್ಪತ್ರೆಯ ಮೂರನೇ ಮಹಡಿಯ ಕಿಟಕಿಯಿಂದ ಏಕಾಏಕಿ ಜಗಿದಿದ್ದ. ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಟ್ಟರೂ ಸ್ಪಂದಿಸದೇ ಮೃತಪಟ್ಟಿದ್ದಾನೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.