ತಾಳ್ಮೆಯಿಂದ ಇದ್ದರೆ ಸಂಸಾರ ಸುಗಮ

MAY 19-HRP-01
ಹರಪನಹಳ್ಳಿಯಲ್ಲಿ ಧರ್ಮಾರ್ಥ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಸ್ವಾಮೀಜಿಗಳು ಉದ್ಘಾಟಿಸಿದರು. ತೆಗ್ಗಿನ ಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ, ಕೂಡ್ಲಿಗಿ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ವೈದ್ಯ ಅಶ್ವಿನ್ ಕುಮಾರ್ ಪಸಾರ, ಟಿಎಂಎಇ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ಸಂಸ್ಥೆಯ ಡೀನ್ ಟಿ.ಎಂ.ರಾಜಶೇಖರ್ ಇತರರಿದ್ದರು.
Published on

ಹರಪನಹಳ್ಳಿ: ಸಮಾಜದ ಬೆಳವಣಿಗೆಯಲ್ಲಿ ವಿದ್ಯಾದಾನ, ಅನ್ನದಾನದ ಜತೆಗೆ ವೈವಾಹಿಕ ಜೀವನವನ್ನು ಕಟ್ಟಿಕೊಡುವಲ್ಲಿ ಸಹಕರಿಸುವ ಮಠ ಮಾನ್ಯಗಳ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎ.ಪಾಟೀಲ್ ತಿಳಿಸಿದರು.

ಪಟ್ಟಣದ ತೆಗ್ಗಿನ ಸಂಸ್ಥಾನ ಮಠದಲ್ಲಿ ಸೋಮವಾರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ 78ನೇ ಪುಣ್ಯಾರಾಧನೆ ಪ್ರಯುಕ್ತ ಹಮ್ಮಿಕೊಂಡ ಧರ್ಮಾರ್ಥ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನವದಂಪತಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು, ಒಬ್ಬರಿಗೊಬ್ಬರು ಗೌರವ ಹೊಂದಿರಬೇಕು. ಇಬ್ಬರೂ ಸಾಮರಸ್ಯ, ಪ್ರೀತಿ-ವಿಶ್ವಾಸ, ಮುಕ್ತ ಮನಸ್ಸಿನಿಂದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರೆ ಜೀವನ ಸುಮಧುರವಾಗಿರುತ್ತದೆ. ಜೀವನದಲ್ಲಿ ಎಂತಹದ್ದೇ ಸಂದರ್ಭ ಬಂದರೂ ಧೃತಿಗೆಡದೆ ಗಟ್ಟಿ ನಿಲುವು ಹೊಂದಿರಬೇಕು, ಸಂಸಾರದಲ್ಲಿ ಚಿಕ್ಕ-ಪುಟ್ಟ ಬಿರುಕುಗಳು ಸರ್ವೇ ಸಾಮಾನ್ಯವಾಗಿದ್ದು, ಅದನ್ನು ನಿಭಾಯಿಸುವ ಬುದ್ಧಿವಂತಿಕೆ, ತಾಳ್ಮೆ ಮನೋಭಾವ ಹೊಂದಿದರೆ ಸಂಸಾರ ಸುಗಮವಾಗಿರುತ್ತದೆ ಎಂದರು.

ತೆಗ್ಗಿನ ಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ, ಹರಪನಹಳ್ಳಿಯನ್ನು ಶಿಕ್ಷಣದ ಕಾಶಿಯನ್ನಾಗಿ ಮಾಡಿದ ಕೀರ್ತಿ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ, ಕಠಿಣ ಪರಿಶ್ರಮದಿಂದ ಮಠದ ಏಳಿಗೆಗೆ ಜೀವನ ಸವೆಸಿದರು. ಜಗತ್ತಿನಲ್ಲಿ ಅತಿ ಸಿಹಿಯಾದ ವಸ್ತುವೆಂದರೆ ಅದು ಗಂಡು ಹೆಣ್ಣುಗಳ ಒಲುಮೆಯಾಗಿದೆ.

ಪ್ರೀತಿ, ಪ್ರೇಮದಿಂದ ಇದ್ದರೆ ಗುಡಿಸಲಿನಲ್ಲಿಯೂ ಸಂತೋಷದಿಂದ ಜೀವನ ಸಾಗಿಸಲು ಸಾಧ್ಯ. ಬದುಕಿನಲ್ಲಿ ಬಂಗಾರವನ್ನು ಗಳಿಸದೆ ಬಂಗಾರದಂತಹ ಜೀವನವನ್ನು ಸಾಗಿಸಬೇಕು. ಜಗತ್ತಿನ ಸಂತೋಷದ ಧ್ಯೋತಕವೇ ಪ್ರೀತಿಯಾಗಿದೆ. ಹಸಿವಾದವರಿಗೆ ಶಿಕ್ಷಣ, ಅನ್ನದ ಜತೆಗೆ ಇತರ ದಾನ ಮಾಡಬೇಕು ಎಂದರು.

ವರ್ತಕ ಉತ್ತಮ್‌ಚಂದ್ ಜೈನ್, ಆಡಳಿತಾಧಿಕಾರಿ ಟಿ.ಎಂ.ಪ್ರತೀಕ್, ಪ್ರಮುಖರಾದ ತಿಮ್ಮಣ್ಣ ಹುಲ್ಲುಮನಿ, ಟಿ.ಜಿ.ಮಲ್ಲಿಕಾರ್ಜುನ್ ಗೌಡ, ಟಿ.ಎಂ.ವೀರೇಂದ್ರಸ್ವಾಮಿ, ಶಶಿಧರ್ ಪೂಜಾರ, ಟಿ.ಎಂ.ಚನ್ನವೀರಸ್ವಾಮಿ, ಭರತೇಶ್, ಪ್ರಾಂಶುಪಾಲರಾದ ವೀರೇಶ್, ಅರುಣ್ ಕುಮಾರ್, ಮಹಾವೀರ್ ಭಂಡಾರಿ, ಟಿ.ಎಂ.ವಿಶ್ವನಾಥ್, ಟಿ.ಎಂ.ಪ್ರದೀಪ್, ಟಿ.ಎಂ.ನಾಗರಾಜ, ಹುಳ್ಳಿ ಕೊಟ್ರೇಶಪ್ಪ, ಸಿ.ಎಂ.ಕೊಟ್ರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net