ತಾಳ್ಮೆ ಖನಿ ಶ್ರೀರಾಮಚಂದ್ರ

h23-sattur
Published on

ಹುಬ್ಬಳ್ಳಿ: ಮಾತಾ-ಪಿತೃಗಳ ವಾಕ್ಯ ಪರಿಪಾಲನೆ, ತಾಳ್ಮೆ ಖನಿ, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ, ತ್ಯಾಗಮಯಿ, ನಿರಹಂಕಾರಿ, ಸೌಜನ್ಯದ ಮೂರ್ತಿಯಾದ ಶ್ರೀ ರಾಮಚಂದ್ರ ಪ್ರಭು. ಈತನ ಕುರಿತು ಮಹರ್ಷಿ ವಾಲ್ಮೀಕಿಯು ರಾಮಾಯಣ ಹಾಗೂ ಆನಂದ ರಾಮಾಯಣದಲ್ಲಿ ಉಲ್ಲೇಖಿಸಿದ ಸಂಗತಿ ಅತ್ಯದ್ಭುತ ಎಂದು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಪ್ರಧಾನ ಅಧ್ಯಾಪಕರಾದ ರಾಜೇಶ್ವರ ಶಾಸ್ತ್ರಿಗಳು ಸಂದೇಶ ನೀಡಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಸಮೀಪದ ರಾಜಾಜಿನಗರದ ಲಿಂಗ ಭಟ್ಟ ಜೋಶಿ ನಿವಾಸದಲ್ಲಿ ಸೋಮವಾರ ಏರ್ಪಡಿಸಿದ್ದ ಅಯೋಧ್ಯೆಯಲ್ಲಿ ರಾಮನ ನೂತನ ಮಂದಿರ ಹಾಗೂ ರಾಮಲಲ್ಲಾ ಪ್ರತಿಷ್ಠಾಪನೆ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮೆಲ್ಲರ ಬದುಕಿಗೆ ಅಧ್ಯಾತ್ಮ ವಿದ್ಯೆ ಅಗತ್ಯ. ಶ್ರೀರಾಮಚಂದ್ರ ಕೇವಲ ಮನುಕುಲಕ್ಕೆ ಸೀಮಿತವಲ್ಲದೆ, ಸಮಸ್ತ ಪ್ರಾಣಿಗಳಿಗೂ ಆತ ಶಕ್ತಿ , ಭಕ್ತಿ, ಯುಕ್ತಿ ಹಾಗೂ ಅವನಿಂದಲೇ ಮುಕ್ತಿ ಎಂದು ಗುಣಗಾನ ಮಾಡಿದರು.

ಪ್ರಮುಖರಾದ ರಘೊತ್ತಮ ಅವಧಾನಿ, ಕೃಷ್ಣ ಹುನಗುಂದ, ವಿಲಾಸ ಸಬನೀಸ, ಅಶೋಕ ಕುಲಕರ್ಣಿ, ಉದಯ ದೇಶಪಾಂಡೆ, ಹನುಮಂತ ಪುರಾಣಿಕ, ಪಾಂಡುರಂಗ ಕುಲಕರ್ಣಿ, ವಿಠಲ ಅಂಬೇಕರ, ಸಂಜೀವ ಗೊಳಸಂಗಿ, ವೆಂಕಟೇಶ ಕುಲಕರ್ಣಿ, ಡಿ.ಕೆ. ಜೋಶಿ, ಪ್ರಕಾಶ ದೇಸಾಯಿ, ಭೀಮಸೇನ ದಿಗ್ಗಾವಿ, ಬಹದ್ದೂರ ದೇಸಾಯಿ, ಪ್ರಮೋದ ಸಿರುಗುಪ್ಪಿ, ವಿದ್ಯಾಧರ ಕುಲಕರ್ಣಿ, ಆನಂದ ದೇಶಪಾಂಡೆ, ವಾದಿರಾಜಾಚಾರ್ಯ, ಬದ್ರಿನಾಥ ಬೆಟಗೇರಿ, ಪೊ›. ಮಾಮನ ಭಾದ್ರಿ, ಕೇಶವ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net