ತಾಳ್ಮೆಯುತ ಸತತ ಪರಿಶ್ರಮವೇ ಯಶಸ್ಸಿನ ಬುನಾದಿ : ಮೈಸೂರು ಜಿ.ಪಂ. ಇಸಿಒ ಬಿ.ಆರ್. ಪೂರ್ಣಿಮಾ

mysore jss college
Published on

ಮೈಸೂರು: ತಾಳ್ಮೆಯುತ ಸತತ ಪರಿಶ್ರಮವೇ ಯಶಸ್ಸಿನ ಬುನಾದಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹೊಸದಾಗಿ ಪ್ರವೇಶಾತಿ ಪಡೆದ 828 ವಿದ್ಯಾರ್ಥಿ ಗಳಿಗೆ ಕಾಲೇಜಿನ ರಚನೆ ಮತ್ತು ಕಾರ್ಯವೈಖರಿ ಪರಿಚಯಿಸಲು ಗುರುವಾರ ಹಮ್ಮಿಕೊಂಡ ಯುಜಿಸಿ ನಿರ್ದೇಶಿತ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಳ್ಮೆಯುತ ಮತ್ತು ಕೇಂದ್ರೀಕೃತ ಪರಿಶ್ರಮದ ಪರಿಪಾಠವನ್ನು ಯುವಜನರು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ.ಎಸ್. ಗಿರಿಧರರಾವ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಪ್ರೊ.ಎಂ.ಪಿ. ವಿಜಯೇಂದ್ರ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net