ಭವಿಷ್ಯ ರೂಪಿಸಲು ತಾಳ್ಮೆ ಅಗತ್ಯ: ಲಿಂಡಾ ಸಿಂಗಮ್

kodagu vidhyalaya
Published on

ಮಡಿಕೇರಿ: ಮಕ್ಕಳಿಗೆ ಸುಂದರ ಭವಿಷ್ಯ ರೂಪಿಸಲು ತಾಳ್ಮೆ ಮುಖ್ಯ ಎಂದು ಸುಂಟಿಕೊಪ್ಪದ ಶಾಂತಿ ಭವನ್ ನರ್ಸರಿ ಶಾಲೆಯ ಸಂಸ್ಥಾಪಕಿ ಲಿಂಡಾ ಸಿಂಗಮ್ ಪಾಲಕರಿರಿಗೆ ಸಲಹೆ ಮಾಡಿದರು.


ನಗರದ ಕೊಡಗು ವಿದ್ಯಾಲಯ ಶಾಲೆಯಲ್ಲಿ ಇತ್ತೀಚೆಗೆ ನಡೆದ ಯುಕೆಜಿ ಮಕ್ಕಳಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಯುಕೆಜಿ ಮಕ್ಕಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿ, ಸಣ್ಣ ಮಕ್ಕಳು ಉದ್ಯಾನವನದಲ್ಲಿರುವ ಹೂವಿನ ಹಾಗೆ. ಪುಷ್ಪ ಸಸಿಯಲ್ಲಿರುವ ಮೊಗ್ಗು ಎಷ್ಟು ಸುಂದರವಾದ ಹೂವಾಗಿ ಅರಳುತ್ತದೋ ಅದೇ ರೀತಿ ಸುಂದರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ತಾಳ್ಮೆ ಮುಖ್ಯ ಎಂದು ಪಾಲಕರಿಗೆ ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಕೆ.ಎಸ್.ಸುಮಿತ್ರ, ಆಡಳಿತ ನಿರ್ವಹಣಾಧಿಕಾರಿ ಪಿ.ರವಿ, ಆಡಳಿತ ಮಂಡಳಿ ಸದಸ್ಯ ಸಿ.ಎಸ್.ಗುರುದತ್ತ್, ಹಿರಿಯ ವಕೀಲರು ಹಾಗೂ ಶಾಲೆಯ ಕಾನೂನು ಸಲಹೆಗಾರ ಡಿ.ಜಿ.ಕಿಶೋರ್, ಪಾಲಕರು, ಭೋಧಕ ಹಾಗೂ ಭೋಧಕೇತರ ವರ್ಗದವರು ಪಾಲ್ಗೊಂಡಿದ್ದರು.


ಪ್ಲೆ ಹೋಮ್, ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯ ಪುಟಾಣಿ ಮಕ್ಕಳಿಂದ ವಿಭಿನ್ನ ರೀತಿಯ ನೃತ್ಯ ಪ್ರದರ್ಶನ ನೆರೆದಿದ್ದ ಪಾಲಕರ ಕಣ್ಮನ ಸೆಳೆದವು. ಕಾರ್ಯಕ್ರಮದ ಕೊನೆಯಲ್ಲಿ ಆಕಾಶ ಬುಟ್ಟಿಯನ್ನು ಹಾರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net