ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ: ರಕ್ತದಲ್ಲಿ ಹೆಬ್ಬೆಟ್ಟು ಮುದ್ರೆ ಹೊತ್ತಿದ ಅಭಿಮಾನಿ

1 (9)
Published on

ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪತ್ರ ಚಳವಳಿ ನಡೆಸಿದರು. ಈ ಪೈಕಿ ತಾಲೂಕು ಉಪಾಧ್ಯಕ್ಷ ಎಸ್.ಶಿವಕುಮಾರ್ ಆರಾಧ್ಯ ರಕ್ತದಲ್ಲಿ ಹೆಬ್ಬೆಟ್ಟು ಮುದ್ರೆ ಹೊತ್ತಿ ಗಮನಸೆಳೆದರು.

ನಗರದ ಕೇಂದ್ರ ಅಂಚೆ ಕಚೇರಿ ಜಮಾಯಿಸಿದ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರಿಗೆ ಅಂಚೆ ಪತ್ರಗಳನ್ನು ಕಳುಹಿಸಿದರು. ಕರ್ನಾಟಕದಲ್ಲಿ ಬಿಜೆಪಿಯನ್ನು ಸಂಘಟಿಸಿ 1 ರಿಂದ 114 ಕ್ಷೇತ್ರದಲ್ಲಿ ಗೆದ್ದು ಬಿ.ಎಸ್.ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ ರಾಜ್ಯ ಹಾಗೂ ರಾಷ್ಟ್ರೀಯ ಕೆಲ ನಾಯಕರ ಬೇಜವಾಬ್ದಾರಿತನದಿಂದ ಕಳೆದ ವಿಧಾನಸಭಾ ಚುನಾವಣೆಯನ್ನು ಸೋಲಬೇಕಾಯಿತು. ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಮುಂಬರುವ ಲೋಕಸಭೆ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಆಗ್ರಹಿಸಿದರು.

ಬಿಜೆಪಿ ಒಬಿಸಿ ಮೋರ್ಚಾ ನಗರಾಧ್ಯಕ್ಷ ಆನಂದ್, ರೇವನಂಜುಂಡಸ್ವಾಮಿ, ರಕ್ಷಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net