‘ಪಾತಾಳ್ ಲೋಕ್’ ವೆಬ್‌ಸಿರೀಸ್ ನಿಷೇಧಿಲು ಹಿಂದು ಜನಜಾಗೃತಿ ಸಮಿತಿ ಆಗ್ರಹ

hjs new
Published on

ಉಡುಪಿ: ಅನುಷ್ಕಾ ಶರ್ಮಾ ಪ್ರೊಡಕ್ಷನ್ ಮೂಲಕ ‘ಪಾತಾಳ್ ಲೋಕ್’ ವೆಬ್‌ಸಿರೀಸ್ ಸಂಪೂರ್ಣವಾಗಿ ಹಿಂದು ವಿರೋಧಿ ನಿಲುವಿನ ಅತ್ಯಂತ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಕೂಡಲೇ ಈ ವೆಬ್‌ಸಿರೀಸ್ ನಿಷೇಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ. ಹೆಣ್ಣು ನಾಯಿಗೆ ‘ಸಾವಿತ್ರಿ’ ಎಂದು ಹೆಸರಿಡಲಾಗಿದೆ. ದೇವಸ್ಥಾನದಲ್ಲಿ ಅರ್ಚಕರು ಮಾಂಸ ಬೇಯಿಸಿ ತಿನ್ನುವಂತೆ ತೋರಿಸಲಾಗಿದೆ. ಕೇಸರಿ ಬಟ್ಟೆಗಳನ್ನು ತೊಟ್ಟ ಜನರು ‘ಜೈ ಶ್ರೀರಾಮ್’ ಹೇಳಿ ಗೂಂಡಾಗಿರಿ ಮಾಡುವಂತೆ ತೊರಿಸಲಾಗಿದೆ. ಸಾಧು- ಸಂತರಿಗೆ ಅವಾಚ್ಯ ನಿಂದಿಸುವ ದೃಶ್ಯವಿದೆ. ವ್ಯಕ್ತಿಯೊಬ್ಬ ಜನಿವಾರ ಹಾಕಿ ಬಲಾತ್ಕಾರ ಮಾಡುವಂತೆ ತೋರಿಸಲಾಗಿದೆ. ಮುಸಲ್ಮಾನ ಮಹಿಳೆ ಹಿಂದು ಮಹಿಳೆಗೆ ನೀರು ನೀಡುತ್ತಾಳೆ. ಹಿಂದು ಮಹಿಳೆ ನೀರು ಕುಡಿಯಲು ತಿರಸ್ಕರಿಸುತ್ತಾಳೆ, ಹೀಗೆ ಅನೇಕ ರೀತಿಯಲ್ಲಿ ಸಮಾಜದಲ್ಲಿ ಕೋಮುದ್ವೇಷ ಹಬ್ಬಿಸುವ ಹಾಗೂ ಹಿಂದು ಧರ್ಮದ ಬಗ್ಗೆ ದ್ವೇಷ ಹಬ್ಬಿಸುವ ಅತ್ಯಂತ ಖಂಡನೀಯ ದೃಶ್ಯಗಳಿವೆ. ಕೇಂದ್ರ ಸರ್ಕಾರ ಇಂಥ ವೆಬ್‌ಸಿರೀಸ್‌ಗಳ ಮೇಲೆ ನಿಯಂತ್ರಣ ಹೇರಲು ಕಠಿಣ ಕಾನೂನು ರೂಪಿಸಬೇಕು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net