ಅಟಲ್ ಅಭಿವೃದ್ಧಿ ಪಥದಲ್ಲಿ ದೇಶದ ಮುನ್ನಡೆ

CTD 25 BJP-04
Published on

ಚಿತ್ರದುರ್ಗ: ಕವಿ ಹೃದಯದ,ರಾಜಕೀಯ ಮುತ್ಸದ್ಧಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ಹಾಕಿಕೊಟ್ಟಿರುವ ಅಭಿವೃದ್ಧಿಯ ಮಾರ್ಗದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.

ಅಟಲ್‌ಬಿಹಾರಿ ವಾಜಪೇರಿ ಜನ್ಮ ದಿನಾಚರಣೆ ಅಂಗವಾಗಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಮಾತನಾಡಿ,ವಾಜಪೇಯಿ ದೇಶದ ಹೆಮ್ಮೆಯ ಪುತ್ರ.ಗ್ರಾಮ ಸಡಕ್ ಯೋಜನೆ,ಚತುಷ್ಪಥ ರಸ್ತೆ,ಸರ್ವ ಶಿಕ್ಷಣ ಅಭಿಯಾನ ಮೊದಲಾದ ಯೋಜನೆಗಳ ರೂವಾರಿ,ಆಜಾತ ಶತ್ರು ಎಂದೇ ಹೆಸರಾಗಿದ್ದ ವಾಜಪೇಯಿ ಅವರ 23 ಪಕ್ಷಗಳನ್ನು ಒಗ್ಗೂಡಿಸಿಕೊಂಡು ಕೇಂದ್ರದಲ್ಲಿ ಆ ಡ ಳಿತ ನಡೆಸಿದ್ದನ್ನು ಸ್ಮರಿಸಿದರು.

ಕಾರ‌್ಯಕರ್ತರೆಂದು ವಾಜಪೇಯಿ ಅವರಿಗೆ ಅಪಾರ ಅಭಿಮಾನ,ಅವರು ತೋರಿಸಿದ ಮಾರ್ಗದಲ್ಲಿ ನಡೆಯುತ್ತಿರುವ ಮೋದಿ ಅವರು,ದೇಶದ ಏಳಿಗೆಗಾಗಿ ಹತ್ತು ಹಲವು ಯೋಜನೆಗಳನ್ನಿಂದು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ ಮಾತನಾಡಿ,ವಾಜಪೇಯಿ ಅಕ್ಕಪಕ್ಕ ದೇಶಗಳೊಂದಿಗೆ ಸ್ನೇಹ ಪರ ನಿಲುವನ್ನು ನೆನಪಿಸಿಕೊಂಡರು. ಕು ಡಾ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ,ನವೀನ್ ಚಾಲುಕ್ಯ,ಡಾ.ಸಿದ್ದಾರ್ಥ ಗುಂಡಾರ್ಪಿ,ಮಲ್ಲಿಕಾರ್ಜನ್,ನಾಗರಾಜ್‌ಬೇದ್ರೆ, ಸಂಪತ್ ಕುಮಾರ್,ಶೈಲಜಾ ರೆಡ್ಡಿ,ವೆಂಕಟೇಶ್‌ಯಾದವ್,ರೇಖಾ,ಹರೀಶ್,ಬಸಮ್ಮ,ಕವನ,ಕಿರಣ್,ಶಂಭು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net