

ಹುಬ್ಬಳ್ಳಿ: ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ, ಯೋಗಾಚಾರ್ಯ ಭವರಲಾಲ್ ಆರ್ಯ ಅವರಿಗೆ ಕಲಬುಗಿರ್ಯ ಕೇಸರಿ ಬೆಟ್ಟದಲ್ಲಿರುವ ಶ್ರೀ ಸಾಂಬಶಿವಯೋಗೀಶ್ವರ ಮಠದಲ್ಲಿ ಶ್ರಾವಣ ಮಾಸದ ವಿಶೇಷ ತಪೋನುಷ್ಠಾನ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಉಪಾಚಾರ್ಯರತ್ನ ಶ್ರೀ ತಪೋರತ್ನ ಬಾಲತಪಸ್ವಿ ದ್ವೀತಿಯ ಸಾಂಬಶಿವಾಚಾರ್ಯರ ಉಪಸ್ಥಿತಿಯಲ್ಲಿ ಜರುಗಿದ ಸಮಾರಂಭದಲ್ಲಿ ಬೆಳ್ಳಿ ಕಿರೀಟ ತೊಡಿಸಿ ವಿಶೇಷ ಗೌರವ ಸನ್ಮಾನ ನೀಡಲಾಯಿತು.
ಯೋಗಸೇವೆಯಲ್ಲಿ ಸಹಯಾತ್ರಿಗಳಾಗಿರುವ ಪತಂಜಲಿ ಪರಿವಾರ ಕರ್ನಾಟಕದ ಲಕ್ಷಾಂತರ ಗುರು ಬಂಧು ಭಗಿನಿಯರಿಗೆ ಹಾಗೂ ಸಮಸ್ತ ಭಾರತದ ಗುರುಪರಂಪರೆಗೆ ಈ ಗೌರವ ಸಮಪಿರ್ಸುವುದಾಗಿ ಆರ್ಯ ಅವರು ತಿಳಿಸಿದ್ದಾರೆ.