

ಬೆಳಗಾವಿ: ಖಾನಾಪುರದ ಪಟ್ಟಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ 30 ದಿನಗಳ ಪತಂಜಲಿ ಯೋಗ ಶಿಕರ ತರಬೇತಿ ಶಿಬಿರ ಭಾನುವಾರ ಸಮಾರೋಪಗೊಂಡಿತು.
ಪತಂಜಲಿ ಯೋಗ ಸಮಿತಿ ಉತ್ತರ ಕರ್ನಾಟಕದ ರಾಜ್ಯ ಪ್ರಭಾರಿ ಕಿರಣ ಮನ್ನೋಲ್ಕರ ಮಾತನಾಡಿದರು. ಪತಂಜಲಿ ಯೋಗ ಪೀಠದಿಂದ ವಕೀಲ ಸುಭಾಷ ದೇಶಪಾಂಡೆ ಮತ್ತು ಗಾಂಧಾಲಿ ದೇಶಪಾಂಡೆ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯೋಗ ತರಬೇತಿ ಪಡೆದ 75ಕ್ಕೂ ಹೆಚ್ಚು ಜನರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪತಂಜಲಿ ಯೋಗ ಸಮಿತಿಯ ಮೋಹನ ಬಾಗೇವಾಡಿ, ಪುರುಷೋತ್ತಮ ಪಟೇಲ, ಜ್ಯೋತಿಬಾ ಭದ್ವಾನಕರ, ಶಂಕರ ಕುದ್ರಿ, ಅರವಿಂದ ಕುಲಕರ್ಣಿ, ನಿರ್ಮಲಾ ದೇಸಾಯಿ, ವಸಂತ ದೇಸಾಯಿ, ಉಮಾ ರ್ಶಿ, ಲಕ್ಷಿ$್ಮ ಗುರವ, ಸರಿತಾ ಪಾಟೀಲ, ಅಂಜನಾ ಹಲಕರ್ಣಿ, ಆನಂದ ಅರಳಿಕಟ್ಟಿ, ವಿನಾಯಕ ವಾರ್ದೆ, ಅಪ್ಪಯ್ಯ ಕೊಡೊಲಿ, ಜ್ಯೋತಿಬಾ ರೇಮಾನಿ, ಪೂಜಾ ವಾಗಲೆ, ರಮೇಶ ಮಹಡಿಕ ಇತರರಿದ್ದರು.