ಅನಾರೋಗ್ಯದಿಂದ ಮುಕ್ತರಾಗಲು ಯೋಗದತ್ತ ಒಲವು

hnl yoga june 20
Published on

ಹೊನ್ನಾಳಿ: ಪ್ರಸ್ತುತ ಯೋಗ ಇಡೀ ವಿಶ್ವಕ್ಕೆ ಚಿರಪರಿಚಿತ. ದೀರ್ಘಕಾಲದ ಅನಾರೋಗ್ಯದಿಂದ ಮುಕ್ತರಾಗಲು ಅನೇಕ ದೇಶಗಳು ಯೋಗಕ್ಕೆ ಮಾರುಹೋಗಿದ್ದಾರೆ ಎಂದು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿದರು.

ಜೂ.21 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶುಕ್ರವಾರ ಪಟ್ಟಣದಲ್ಲಿ ಭಾರತೀಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಯೋಗ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, 177ಕ್ಕೂ ಹೆಚ್ಚು ರಾಷ್ಟ್ರಗಳು ಯೋಗ ದಿನವನ್ನು ಆಚರಿಸುತ್ತಿರುವುದು, ಭಾರತೀಯರು ಹೆಮ್ಮೆ ಪಡುವ ವಿಷಯವಾಗಿದೆ ಎಂದರು.

ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಕಾರ್ಯನಿರತ ತಾಲೂಕು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಶನಿವಾರ ಪಟ್ಟಣದ ಹಿರೇಕಲ್ಮಠ ಆವರಣದಲ್ಲಿ ಯೋಗ ದಿನ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪುರಸಭೆ ಅಧ್ಯಕ್ಷ ಮೈಲಪ್ಪ, ಎಸಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ, ಪೊಲೀಸ್ ಇನ್ಸ್​ಸ್ಪೆಕ್ಟರ್ ಸುನಿಲ್​ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಜಾಥಾದಲ್ಲಿ ಪತಂಜಲಿ ಯೋಗ ಸಮಿತಿಯ ರುದ್ರೇಶ್, ರಾಘವೇಂದ್ರ ವೈಶ್ಯರ್, ಸುರೇಶ್ ಕುಂಬಾರ್, ಜಗದೀಶ್ ಆಚಾರ್,ದಿಲೀಪ್​ಕುಮಾರ್, ಕೆ. ಚಂದ್ರಪ್ಪ, ಲಕ್ಷ್ಮೀ ವೈಶ್ಯರ್, ಜ್ಯೋತಿ, ದಾಕ್ಷಾಯಿಣಿ, ಮೀನಾ, ಗಣೇಶ್, ಶೀಲಾ,ಯಶೋದಾ, ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net