ಜಗತ್ತಿಗೆ ಯೋಗವೇ ಆಧಾರ

IMG-20240621-WA0004
Published on

ಉಡುಪಿ : ಜಗತ್ತು ಯೋಗದ ಆಧಾರದಲ್ಲಿ ನಿಂತಿದೆ. ಯೋಗವೆಂದರೆ ಕೇವಲ ಆಸನ, ಪ್ರಾಣಾಯಾಮಗಳಿಗೆ ಸೀಮಿತವಾಗಿಲ್ಲ. ಕರ್ತವ್ಯಗಳಲ್ಲಿ ಪರಿಪೂರ್ಣತೆಯೇ ಯೋಗ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.


ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಪತಂಜಲಿ ಯೋಗ ಪೀಠ ಆಶ್ರಯದಲ್ಲಿ ವಿಜಯವಾಣಿ ದಿನಪತ್ರಿಕೆ, ಬ್ರಹ್ಮಗಿರಿ ಶ್ರೀಕೃಷ್ಣ ಯೋಗ ಕೇಂದ್ರ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ಚಿಟ್ಟಾಡಿ ನಿರಂತರ ಯೋಗ ಕೇಂದ್ರ, ಎಲ್​. ಐ. ಸಿ. ಆಫ್​ ಇಂಡಿಯಾ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.


ಭಾರತ್​ ಸ್ವಾಭಿಮಾನ್​ ಟ್ರಸ್ಟ್​ನ ವೆಂಕಟೇಶ್​ ಮೆಹಂದಳೆ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಕೆ. ರಾಘವೇಂದ್ರ ಭಟ್​, ದಿವಾನ್​ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್​ ಭಟ್​, ಶ್ರೀಪತಿ ಭಟ್​, ಹರಿಪ್ರಸಾದ್​ ಕೆ. ಮೊದಲಾದವರು ಭಾಗವಹಿಸಿದ್ದರು. ನಿರಂತರ ಯೋಗ ವಿಜ್ಞಾನ ಕೇಂದ್ರ ಶಿಕ್ಷಕಿ ಮಮತಾ ಶೆಟ್ಟಿಗಾರ್​ ಪ್ರಾತ್ಯಕೆ ನಡೆಸಿಕೊಟ್ಟರು. ರಂಜಿತ್​ ಕೆ.ಎಸ್​. ಕಾರ್ಯಕ್ರಮ ನಿರೂಪಿಸಿ, ಲಕ್ಷ$್ಮಣ ಕೆ. ವಂದಿಸಿದರು. 300ಕ್ಕೂ ಅಧಿಕ ಮಂದಿ ಯೋಗಾಸನ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net