ಪತಂಜಲಿ ಯೋಗ ಸಮಿತಿಯಿಂದ ರಾಮ ನವಮಿ

18GDG07
Published on

ಗದಗ: ಪತಂಜಲಿ ಯೋಗ ಸಮಿತಿ ವತಿಯಿಂದ ನಗರದ ಮುನ್ಸಿಪಲ್​ ಕಾಲೇಜು ಮೈದಾನದಲ್ಲಿ ಶುಕ್ರವಾರ ರಾಮ ನವಮಿಯನ್ನು ಆಚರಿಸಲಾಯಿತು.
ಭಾರತ ಸ್ವಾಭಿಮಾನ ಟ್ರಸ್ಟ ಜಿಲ್ಲಾ ಪ್ರಭಾರಿ ರುದ್ರಣ್ಣ ಗುಳಗುಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ನಮಗೆಲ್ಲ ಶುಭ ದಿನ. ರಾಮ ಜನ್ಮ ದಿನದಂತೆ ಜನಿಸಿದ ವಿಶ್ವದಲ್ಲಿಯೇ ಯೋಗದ ಸಾಮ್ರಾಜ್ಯವನ್ನು ಕಟ್ಟಿದ ಯೋಗ ಗುರು ಬಾಬಾ ರಾಮದೇವ ಗುರುಗಳು ಜನಿಸಿದ ದಿನ. ಅವರು ಸನ್ಯಾಸವನ್ನು ಸ್ವೀಕರಿಸಿದ ದಿನ. ಸಾವಿರಾರು ಜನರಿಗೆ ಸನ್ಯಾಸ ದೀೆವನ್ನು ನೀಡುತ್ತಿರುವ ದಿನ. ಶ್ರೀರಾಮರಿಗೆ ಅಯೋಧ್ಯಯ ಸಾಮ್ರಾಜ್ಯದಲ್ಲಿ ಬಂದ ಅನೇಕ ಸಮಸ್ಯೆಗಳು ಇವರ ಜೀವನದಲ್ಲಿಯೂ ಬರುತ್ತಿವೆ. ಅವುಗಳನ್ನು ಶ್ರೀರಾಮ ಆಶೀರ್ವಾದದಿಂದ ಬಗೆಹರಿಸುತ್ತ, ತಾವು ಕೈಗೊಂಡ ಕಾರ್ಯ ರ್ಪೂಣಗೊಳಿಸುವ ಛಲವನ್ನು ಹೊಂದಿದ್ದಾರೆ ಎಂದರು.
ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಆಂಜನೇಶ ಮಾನೆ ಮಾತನಾಡಿ, ಕೂಡು ಕುಟುಂಬ ಹೇಗಿರಬೇಕು, ಅದರಲ್ಲಿ ಬರುವ ಜವಾಬ್ದಾರಿಗಳನ್ನು ಯಾವುದೇ ಗೌರವಕ್ಕೆ ಚ್ಯುತಿ ಬಾರದಂತೆ ಹೇಗೆ ನಿಭಾಯಿಸಬೇಕು ಎಂಬುದನ್ನು ಶ್ರೀ ರಾಮರ ಚರಿತ್ರೆಯಲ್ಲಿ ನಾವು ತಿಳಿದುಕೊಳ್ಳುತ್ತೇವೆ. ಶ್ರೀರಾಮ ಅಧರ್ಮ ನಾಶ ಮಾಡಿ ಧರ್ಮ ಸ್ಥಾಪನೆಗಾಗಿಯೇ ಹುಟ್ಟಿ ಬಂದವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net