

ಹುಬ್ಬಳ್ಳಿ: ಇಲ್ಲಿಯ ಆರ್.ಎನ್. ಶೆಟ್ಟಿ ರಸ್ತೆ ಮುಕುಂದನಗರದಲ್ಲಿ ನಿಮಿರ್ಸಲಾಗಿರುವ ವಿಶ್ವಚೇತನ ಯೋಗ ಹಾಗೂ ರೀಸರ್ಚ್ ಸೆಂಟರ್ ಪತಂಜಲಿ ವೆಲ್ ನೆಸ್ ಕೇಂದ್ರದ ಆರಂಭೋತ್ಸವ ಜರುಗಿತು.
ಎಂಡಬ್ಲೂಬಿ ಗ್ರೂಪ್ ಹಾಗೂ ಪತಂಜಲಿ ಸಹಯೋಗದಲ್ಲಿ ದಕ್ಷಿಣ ಭಾರತದ ಮೊದಲ ಅಡ್ವಾನ್ಸ್ ಥೆರಪಿ ಹೊಂದಿರುವ ಪತಂಜಲಿ ವೆಲ್ ನೆಸ್ ಕೇಂದ್ರದ ಉದ್ಘಾಟನೆಯನ್ನು ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಯೋಗಗುರು ಭವರಲಾಲ್ ಆರ್ಯ ನೆರವೇರಿಸಿದರು.
ಆಯುರ್ವೇದ, ಯೋಗ, ನ್ಯಾಚುರೋಪಥಿ, ಅಕ್ಯುಪಂಕ್ಚರ್, ಪ್ರಕೃತಿ ಚಿಕಿತ್ಸೆ ಸೇರಿ ಭಾರತದ ಪ್ರಾಚಿನ ಸಮಗ್ರ ಆರೋಗ್ಯ ಚಿಕಿತ್ಸೆಗಳ ಪದ್ಧತಿಯಂತೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬೊಜ್ಜು, ಮಧುಮೇಹ, ಬಿಪಿ, ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯಲಿದೆ ಎಂದು ಆರ್ಯ ಅವರು ಹೇಳಿದರು.
ಶೃಂಗಿ ಚಿಕಿತ್ಸೆ ಮೂಲಕ ನರ, ಮೂಳೆ ಸಮಸ್ಯೆ ನಿವಾರಿಸಬಹುದು. ಶಿರೋಧಾನ, ಅಭ್ಯಂಗ, ಸ್ವೇದ, ಲೀಚ್ ಥೆರಪಿ, ಅಗ್ನಿಪರೀಾ ಮುಂತಾದ 300ಕ್ಕೂ ಹೆಚ್ಚು ಚಿಕಿತ್ಸೆಗಳು ಇಲ್ಲಿ ಸಿಗಲಿವೆ. ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಹೈಡ್ರೊ ಕೊರೊನ್ ಥೆರಪಿ ಸೌಲಭ್ಯ ಆರಂಭಿಸಲಾಗಿದೆ ಎಂದರು.
ಸದ್ಯ ಹೊರ ರೋಗಿಗಳ ವಿಭಾಗ ಆರಂಭಿಸಲಾಗಿದ್ದು, ರೋಗಿಗಳು ರ್ಪೂತಿದಿನ ಇದ್ದು ಚಿಕಿತ್ಸೆ ಪಡೆಯಬೇಕು. ಈ ವೇಳೆ ಆಹಾರ ಪದ್ಧತಿ ಅನುಸರಿಸಬೇಕಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಇದೆ. ಪ್ರತಿ ಜಿಲ್ಲೆಯಲ್ಲಿ ಇಂತಹ ಚಿಕಿತ್ಸೆ ಕೇಂದ್ರ ತೆರೆಯಬೇಕೆಂಬುದು ನಮ್ಮ ಇಚ್ಚೆ. ಆಸಕ್ತರು ಮುಂದೆ ಬಂದರೆ ಬೆಂಬಲಿಸಲಾಗುವುದು ಎಂದು ಭವರಲಾಲ್ ಆರ್ಯ ತಿಳಿಸಿದರು.
ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ, ಶಿಕ್ಷಕಿಯರನ್ನು ಯೋಗ ವಾರಿಯರ್ಸ್ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಎಂಡಬ್ಲ್ಯುಬಿ ಗ್ರೂಪ್ನ ಪತಂಜಲಿ ವೆಲ್ ನೆಸ್ ಕೇಂದ್ರದ ಅಧ್ಯಕ್ಷ ರಮೇಶ ಬಾಣಾ, ಉಪಾಧ್ಯಕ್ಷ ಗೌತಮ ಬಾಣಾ, ಧರ್ಮದರ್ಶಿ ಉಕಚಂದ ಬಾಣಾ, ಕೇಂದ್ರದ ಕಾರ್ಯದರ್ಶಿ ಮುಖೇಶ ಬಾಣಾ, ಯೋಗ ಶಿಕ್ಷಕರು, ಸಿಬ್ಬಂದಿ ಇದ್ದರು.