

ಕಲಬುರಗಿ: ಆರೋಗ್ಯ ಸುಸ್ಥಿತಿಯಲ್ಲಿದ್ದು, ಸದೃಢ ಶರೀರಕ್ಕಾಗಿ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಡಾ.ಶಿವಪುತ್ರಪ್ಪ ಮಹಾಂತಪುರ ಹೇಳಿದರು.
ನಗರದ ಶ್ರೀರಾಮ ಮಂದಿರ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಕಿಸಾನ್ ಸೇವಾ ಸಮಿತಿ, ಯುವ ಭಾರತ ಸಮಿತಿಯಿಂದ ಆಚಾರ್ಯ ಬಾಲಕೃಷ್ಣ ಜನ್ಮದಿನ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಜಡಿಬೂಟಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಉತ್ತರ ಪ್ರದೇಶ ಆಗ್ರಾದ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಂಜುಶ್ರೀ ಮಾತನಾಡಿ, ಆಯುರ್ವೇದ ಭಾರತದ ಶಕ್ತಿಯಾಗಿದೆ. ಅಡುಗೆ ಮನೆಯಿಂದ ಹಿಡಿದು ಅಂಗಳದಲ್ಲಿನ ಪ್ರತಿ ಸಸಿಯಲ್ಲೂ ಔಷಧದ ಅಂಶ ಅಡಗಿದೆ. ಸರಿಯಾಗಿ ಅರಿತು ಬಳಸಿದರೆ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆಯೇ ಬರಲ್ಲ. ಅಡ್ಡ ಪರಿಣಾಮವೂ ಇರುವುದಿಲ್ಲ ಎಂದರು.
ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಅವರು ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಭಾರತದ ಶಕ್ತಿಯಾಗಿರುವ ಯೋಗ ಮತ್ತು ಆಯುರ್ವೇದವನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಾವೆಲ್ಲರೂ ಸ್ವದೇಶಿ ಚಿಂತನೆ ಬೆಳೆಸಿಕೊಳ್ಳಬೇಕು. ವಿನಾಕಾರಣ ಆಸ್ಪತ್ರೆಗಳಿಗೆ ಅಲೆಯುವುದು, ಅನಾರೋಗ್ಯಕ್ಕೆ ಈಡಾಗುವುದು ಬಿಡಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಉಮೇಶ ಗೋಡಬೋಲೆ, ಚಂದ್ರಶೇಖರ ಗುರಗುಂಟಿ, ಬಂಡು ತುಕಾರಾಮ, ಇಂದಿರಾ ರಾಠೋಡ್, ಹನುಮಾನಸಿಂಗ್ ಠಾಕೂರ್, ಸುನಿತಾ ಠಾಕೂರ್, ಕಾವೇರಿ ಪಾಟೀಲ್, ಕವಿತಾ, ವಿಜಯಲಕ್ಷಿö ಬಿದರಿ, ಘನಶ್ಯಾಮ ಗುತ್ತೇದಾರ್, ಯಲ್ಲಾಲಿಂಗ ಪಾಟೀಲ್, ಅಶೋಕ ಪಾಟೀಲ್, ಬಾಬುರಾವ ಜಾಧವ್, ದೇಶಪಾಂಡೆ, ಜಯಪ್ಪ ಬಡಿಗೇರ, ನಿಂಗಣ್ಣ ವಿಶ್ವಕರ್ಮ ಇತರರಿದ್ದರು.
ಕಿಸಾನ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ರಮೇಶ ಮಹೇಂದ್ರಕರ್ ಔಷಧ ಗಿಡಗಳನ್ನು ವಿತರಿಸಿದರು. ಮಂಜುಳಾ ತಡಿಬಿಡಿ ಮಠ ಸ್ವಾಗತಿಸಿದರು. ದಾಮೋಧರ ನಿರೂಪಣೆ ಮಾಡಿದರು. ಲಲಿತಾ ಬೂತಪೂರ ವಂದಿಸಿದರು.